ಈ ಖಾಸಗಿ ನ್ಯೂಸ ವಾಹಿನಿಯರ ವರ್ತನೆಗೆ ಏನು ಹೇಳಬೇಕೊ ತಿಳಿಯದು, ತಮ್ಮ ರೇಟಿಂಗ್ ಗಳನ್ನು ಹೆಚ್ಚಿಸಿಕೊಳ್ಳುವ ನೆಪದಲ್ಲಿ ಅತ್ಯುನ್ನತ ವ್ಯಕ್ತಿಗಳನ್ನು ಪಾತಳಕ್ಕೆ ತಳ್ಳುವುದು ಅಂದರೆ ಏನರ್ಥ...
ನಿನ್ನೆ ಒಂದು ಕಾರ್ಯಕ್ರಮ ನೋಡಿದೆ, ಅದು ಪೇಸ್-ಭೂಪತಿ ಅವರ ನಡುವಿನ ದ್ವೇಷದ ಕುರಿತಾಗಿ.. ಈ ನ್ಯೂಸ ಮಹಾಶಯರು ಅದರ ರಹಸ್ಯ ಭೇದಿಸಲು ಹೊರಟರು, ಅವರು ಅದಕ್ಕೆ ಕೊಟ್ಟ ಒಂದೊಂದು ಕಾರಣಗಳೊ, ವ್ಹಾವ್ಹಾ :/ ಆ ದೇವರಿಗೆ ಪ್ರೀತಿ... ಪಕ್ಕಾ 'ಮಾಸ್'ಪದಗಳಾನ್ನು ಉಪಯೋಗಿಸಿಕೋಂಡು, ಜನರನ್ನು ಸೆಳೆದು ತಮ್ಮ ರೇಟಿಂಗ್ ಹೆಚ್ಚಿಸಿಕೋಂಡರು.. ಅವರು ಹೇಳಿದ ಕೆಲವೋಂದು ಅಂಶಗಳನ್ನು ಇಲ್ಲೆ ಬರೆಯುತ್ತಿದ್ದೇನೆ, ತಪ್ಪು ತಿಳಿಯಬೇಡಿ, ಇದು ಕೇವಲ ನಮ್ಮ ನ್ಯೂಸ್'ನವರ ಪ್ರಮಾಣವನ್ನು ತೋರಿಸಲು ಮತ್ತು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ತೋರಿಸಲು...
**** " ಹೆಡ್ ಲೈನ್ " ****
ಸಾನಿಯಾ ಮಿರ್ಜ ಅವರು ಪೇಸ್-ಭೂಪತಿ ಕಲಹಕ್ಕೆ ಕಾರಣ???
(ಅವರು ಹೇಳಿದ್ದು)
* ಹೌದು, ಈ ಇಬ್ಬರ ದ್ವೇಷಕ್ಕೆ ಸಾನಿಯಾ ಅವರೇ ಪ್ರಮುಖ ಕಾರಣ
* ಮಿಶ್ರಡಬಲ್ಸ್'ನಲ್ಲಿ ಯಾರ ಜೊತೆ ಸಾನಿಯ ಆಡಬೇಕು ಎಂಬುದರ ಕುರಿತು ಮನಸ್ಥಾಪವಾಯಿತು.
* ಸಾನಿಯಾ ಅವರು ಭೂಪತಿ ಜೊತೆ ಆಡಿದ್ದಕ್ಕಾಗಿ ಪೇಸ್'ಗೆ ಭೂಪತಿ ಮೇಲೆ ಕೋಪ..
* ಸಾನಿಯ ಅವರು ಅಂಕಣದಲ್ಲಿ ಆಟಕ್ಕಿಂತ, ಮೈಮಾಟ ತೋರಿಸಿವುದಕ್ಕಾಗಿಯೆ ಹೆಚ್ಚು ಹೆಸರು ಮಾಡಿದ್ದಾರೆ
* ಪೇಸ್-ಭೂಪತಿ ಇಬ್ಬರೂ ಮಹಾರಸಿಕರು, ಅವರು ಸಾನಿಯಾ ಅವರ್ ಜೊತೆ ಆಡಲು ಹಾತೊರೆಯುತ್ತಿದ್ದರು..
* ಸಾನಿಯ ಜೊತೆ ಆಡಿ ಅವರ ಸ್ನೇಹ ಬೆಳೇಸಿಕೊಂಡರೆ, ಅವರ ಜೊತೆ ದೇಶ-ವಿದೇಶ ಸುತ್ತಾಡಿ ಮಜಮಾಡಬಹುದು ಅಂತ ಯೋಚಿಸಿದ್ದರು (ಅಂದ್ರೆ ಸಾನಿಯ ಮಜಾ ಮಾಡುವ ವಸ್ತುವೆ?? ಛ್ಹಿ)
* ಸಾನಿಯ ಅವರನ್ನು ಭೇಟಿ ಮಾಡುವುದಕ್ಕೋಸ್ಕರ ಒಬ್ಬರಿಗೊಬ್ಬರು ಸುಳ್ಳು ಹೇಳಿದ್ದರಂತೆ
* ಸಾನಿಯ ಅವರು ಭೂಪತಿಯ ಬಳಿ, ಪೇಸ'ರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ , ಭೂಪತಿ ಪೇಸ್'ರ ಮೇಲೆ ಕೋಪಗೊಳ್ಳುವಂತೆ ಮಾಡಿದ್ದಾರಂತೆ..
* ಇನ್ನೂ ಅವರಿಬ್ಬರ ವೈಯಕ್ತಿಕ ಜೀವನವನ್ನು ಇದಕ್ಕೆ ಎಳೆದು ತಂದಿದ್ದಾರೆ
* ಅವರಿಬ್ಬರು ಕಾಮಾಪೇಕ್ಷಿಗಳು ಎಂಬರ್ಥದಲ್ಲಿ ಹೇಳಿ, ಅದಕ್ಕಾಗಿಯೆ ಎರಡೆರಡು ಮದುವೆ ಆಗಿದ್ದಾರೆ ಅಂತ ಹೇಳಿದರು
* ಇನ್ನು ಅವರ ಹಳೆಯ ಪ್ರೇಮಿಗಳಾನ್ನೂ ಟಿವಿಯಲ್ಲಿ ತೋರಿಸಿ ಅವರಿಗೂ ಒಂದಷ್ಟು ಪ್ರಚಾರ ಕೊಟ್ಟರು..
ಅಲ್ಲ ಸ್ವಾಮಿ ಇವೆಲ್ಲದಕ್ಕೂ, ಈಗಿನ ಒಲಿಂಪಿಕ್ಸ್ ಕುರಿತಾದ ಸಮಸ್ಯೆಗೆ ಎಷ್ಟರಮಟ್ಟಿಗೆ ಸಂಬಂಧ ಇದೆ.. ಸ್ವಲ್ಪ ಪ್ರಮಾಣದಲ್ಲಿ ಇರಬಹುದು, ಆದ್ರೆ ಈ ರೀತಿಯೆಲ್ಲೆ ಟಿವಿಯಲ್ಲಿ ತೋರಿಸುವುದು ಸರಿಯಾ??
ಒಪ್ಪಿಕೊಳ್ಳೋಣ ಸಾನಿಯಮಿರ್ಜ ಅವರು ಪೇಸ್-ಭೂಪತಿಯವರ ನಡುವಿನ ಮನಸ್ಥಾಪಕ್ಕೆ ಬಾಗಶಃ(ಸಂಪೂರ್ಣ ಅಂತೂ ಅಲ್ಲವೇ ಅಲ್ಲ್) ಕಾರಣವಿರಬಹುದು, ಆದರೆ ಅದನ್ನು ಹೇಳುವುದಕೂ ಒಂದು ವಿಧಾನ ಇದೆ ಅಲ್ವಾ.. ಅದು ಬಿಟ್ಟು ಸಾನಿಯಾ ಅವರನ್ನು ಕೆಟ್ಟದಾಗಿ ಬಿಂಬಿಸಿ, ಅವರಿಬ್ಬರನ್ನು ವಿಲನ್'ಗಳನ್ನಾಗಿ ಮಾಡಲೇಬಾರದು... ಇವರೆಲ್ಲರೂ ನಮ್ಮ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದವರು...
ನ್ಯೂಸ್ ಚಾನಲ್ಲಿನವರೇ.... ದಯವಿಟ್ಟು ಯಾಂತ್ರಿಕರಾಗಬೇಡಿ, ಸತ್ಯವನ್ನು ತೋರಿಸಿ, ಆಗಲೂ ಜನ ಖಂಡಿತ ಮೆಚ್ಚುತ್ತಾರೆ.
Nijavaagiyoo Vichithrave, Shishir..Nanaganthoo Yaavudoo Thalege Hogthane illaa. Media davariganthoo Ketta vichaaragale bareyalu/thorisalu manassagutthade..Very Bad, Allava? Yaavudakko, Mediya davara mele Strict Controal Agathya.
ReplyDelete