View My Stats

Friday, 24 February 2012


ಹೇಗೆ ಸಾಬೀತು ಪಡಿಸಲಿ ನನ್ನ ಪ್ರೀತಿಯನ್ನ
ನಿನ್ನ ಮಾತುಗಳೇ ನನಗೆ ನೀರು-ಅನ್ನ
ನೀನು ಕೊಡಬಹುದು ಸಾರ್ಥಕತೆಯನ್ನ
ಪೂರ್ಣಗೊಳಿಸುತ್ತೀಯೇ ನನ್ನ ಜೀವನವನ್ನ...


ನೀನಿಲ್ಲದೆ ನನ್ನ ಅಸ್ಥಿತ್ವವಿಲ್ಲ
ನೀನೇ ನನಗೆ ಎಲ್ಲ
ಭಗವಂತನೇ ನಿನ್ನ ತೋರಿಸಿದನಲ್ಲ
ನಮ್ಮಿಬ್ಬರಿಗೆ ಕೊಟ್ಟ ಗ್ರೀನ್ ಸಿಗ್ನಲ್ಲ..

Monday, 20 February 2012

ಕನ್ನಡವೇ ಸತ್ಯ ಚಿತ್ರ ನೋಡಿ-ಕವನ ಬರೆ- ೧೨

ಅಪ್ಪ-ಅಮ್ಮ ದುಡಿಯುತ್ತಿದ್ದಾರೆ ದಿನದ ರೂಪಾಯಿ
ನಾನು ಮಾಡುತ್ತೇನೆ ಕೈಲಾದ ಸಹಾಯ
ನಮಗೆ ಇಲ್ಲ ಭದ್ರ ಅಡಿಪಾಯ
ದೇವರಿದ್ದಾನೆ, ನಮಗಿಲ್ಲ ಅಪಾಯ


ಯುತ್ ಕಾಂಗ್ರೆಸ್'ನ ಪ್ರತಿಭಟನೆ...!!???


ಯುತ್ ಕಾಂಗ್ರೆಸ್'ನ ಪ್ರತಿಭಟನೆ...!!???

ಅಲ್ಲಾ ಸ್ವಾಮಿ ಇವರಿಗೇನು ಬೇರೆ ಕೆಲಸ ಇಲ್ವಾ... ಬಿಜೇಪಿಯವರೂ ಏನೆ ಮಾಡಿದರೂ ಇವರಿಗೆ ಸಹಿಸಲು ಆಗುವುದಿಲ್ಲ! ವಿರೋಧ ಪಕ್ಷ ಅಂದ ಮಾತ್ರಕ್ಕೆ, ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸಿವುದು ಇವರ ಕೆಲಸವಲ್ಲ.. ಬಿಜೆಪಿಯವರು ಮಾಡುವುದು ತಪ್ಪೋ ಸರಿಯೋ ಅದು ಬೇರೆ ಮಾತು ಆದರೆ ಅದನ್ನು ವ್ಯಕ್ತಪಡಿಸಲು ಒಂದು ರೀತಿ ಇರುತ್ತದೆ ಅಲ್ಲವಾ..

ಈಗ ನೋಡಿ ಬಿಜೆಪಿಯ 'ಕೃಷ್ಣಯ್ಯ ಶೆಟ್ಟಿ' ಅವರ  ಗಂಗಾಜಲ ವಿತರಣೆ ಹಾಗು 'ಯಡಿಯೂರಪ್ಪ'ನವರ ಕಾಶಿ ಯಾತ್ರೆಯ ಬಗ್ಗೆ ಅಣಕ ಮಾಡುತ್ತಿದ್ದಾರೆ..

ಒಂದು ವಾಹನದ ಮೇಲೆ ಯಡಿಯೂರಪ್ಪನವರ ಭಾವಚಿತ್ರವನ್ನು ಇಟ್ಟು..ಕೃಷ್ಣಯ್ಯ ಶೆಟ್ಟಿ ಅವರ ವೇಷಧಾರಿಯೊಬ್ಬರು ಒಂದು ದೊಡ್ಡ ಬಿಸ್ಲೆರಿ ಡಬ್ಬಿಯನ್ನು ಹಿಡಿದುಕೊಂಡು ಯಡಿಯೂರಪ್ಪನವರ ಭಾವಚಿತ್ರದ ಮೇಲೆ ಮೇಲೆ ನೀರು ಸುರಿಯುತ್ತಿದ್ದಾರೆ..!

ಅವರ ವಾದವೇನು ಗೊತ್ತೆ.. ಕೃಷ್ಣಯ್ಯ ಶೆಟ್ಟಿ ಅವರು ಗಂಗಾಜಲವನ್ನು ಜನರಿಗೆ ಹಂಚಿ ಅದನ್ನು ಅಪವಿತ್ರಗೊಳಿಸುತ್ತಿದ್ದಾರಂತೆ... ಯಡಿಯೂರಪ್ಪನವರು ಅಷ್ಟು ದೂರದವರೆಗೆ ಹೋಗುವುದನ್ನು ಬಿಟ್ಟು ಕೃಷ್ಣಯ್ಯ ಶೆಟ್ಟಿ ಅವರ ಗಂಗಾಜಲದಲ್ಲಿ ಸ್ನಾನಮಾಡಿದರೆ ಸಾಕಾಗಿತ್ತಂತೆ..

ಇದೇನಾ ಅವರಲ್ಲಿರುವ ಪವಿತ್ರತೆ ಅಥವಾ ಇದೇನಾ ಅವರು ತೋರುವ ಗೌರವ ಶ್ರೀಕ್ಷೆತ್ರಕ್ಕೆ..??

ಇನ್ನು ಮುಂದಾಗಿ.. ಕರ್ನಾಟಕದಲ್ಲಿ ನೀರಿಗೆ ಬರವಂತೆ ಹಾಗಾಗಿ ಕೃಷ್ಣಯ್ಯ ಶೆಟ್ಟಿ ಅವರು ನೀರನ್ನು ಹಾಳುಮಾಡಬಾರದಂತೆ.. ಮೊದಲನೆಯದಾಗಿ ಒಂದು ಹನಿ ಗಂಗಾಜಲ ಹಂಚುವುದರಿಂದ ಕರ್ನಾಟಕದ ಜನರಿಗೆ ಏನು ನಷ್ಟವೋ ನಾ ಕಾಣೆ.. ಮೇಲಾಗಿ ಕರ್ನಾಟಕದಲ್ಲಿ ನೀರಿಲ್ಲ ನೀರಿಲ್ಲ ಎಂದುಕೊಂಡೆ ಇವರು ನೀರನ್ನು ಚೆಲ್ಲಿ ಹಾಳುಮಾಡುತ್ತಿದ್ದಾರಲ್ಲ.. ಏನು ಹೇಳಬೇಕು ಇವರಿಗೆ..???

''ಬೇರೆಯವರ್ ತಪ್ಪನ್ನು ಕಂಡುಹಿಡಿಯುವಲ್ಲಿ ನಾವು ಎಷ್ಟು ಸಮಯವನ್ನು ವ್ಯರ್ಥಮಾಡುತ್ತೇವೋ ಅದರ ಕಾಲುಭಾಗದಷ್ಟು ಸಮಯವನ್ನು ನಮ್ಮನ್ನು ನಾವು ತಿದ್ದಿಕೊಳ್ಳುವಲ್ಲಿ ಉಪಯೋಗಿಸಿಕೊಂಡರೆ ಜಗತ್ತಿನ್ನಲ್ಲಿ ಬಹಳಷ್ಟು ಒಳಿತನ್ನು ಕಾಣಬಹುದು...

Wednesday, 15 February 2012

ಕನ್ನಡವೇ ಸತ್ಯ (ಚಿತ್ರ-11)


ಆಳಬೇಡ ತಂಗಿ ಅಳಬೇಡ
ಆದುದರ ನೆನೆದು ಮರುಗಬೇಡ
ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ
ಭೂ-ಆಗಸದ ನಡುವೆ ಇರುವಂತೆ ಮೋಡ


ಮೀನಿಗೆ ನೀರು, ನೀರಿಗೆ ಮೀನು
ಇದ್ದಂತೆ,ನಿನಗೆ ನಾನು ನನಗೆ ನೀನು
ಬದುಕಿ ತೋರಿಸೋಣ
ಕಮ್ಮಿಯಿಲ್ಲನಾವು ಯಾರಿಗೇನು...

ಮೇಡಂ ಬೀಳ್ಕೊಡುಗೆ











ನಮ್ಮ ಮೇಡಂ (ಉಪ ವ್ಯವಸ್ಥಾಪಕರು:ಟ್ರೇನಿಂಗ್ ವಿಭಾಗ) ಇವರಿಗೆ ಬೇರೆ ನೌಕರಿ ಸಿಕ್ಕಿದ್ದರಿಂದ ಬೆಂಗಳೂರಿನೆಡೆಗೆ ಪ್ರಯಾಣ ಬೆಳೆಸಲಿದ್ದಾರೆ, ನಾವು ಇಂದು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟೆವು..ನಮ್ಮೆಲ್ಲರ ಮನಸಲ್ಲಿ ದುಃಖ ತುಂಬಿತ್ತಾದರೂ ನಾವೂ ನಗುನಗುತ್ತಲೆ ಬೀಳ್ಕೊಟ್ಟೆವು. ಅವರೂ    ನಮಗೆ ಯಾವ ವಿಷಯವನ್ನು ತೆಗೆದುಕೊಳ್ಳದಿದ್ದರೂ ನನಗೆ ತುಬ ಆತ್ಮೀಯವಾಗಿದ್ದರು.. ಅವರೂ ಸಹ ನನ್ನನ್ನು ಆತ್ಮೀಯವಾಗಿ ಕಾಣುತ್ತಿದ್ದರು


ನಾನು ಈ ಕಾಲೇಜಿಗೆ ಸೇರಲು ಪ್ರವೇಶ ಪರೀಕ್ಷೆ ಬರೆಯುವ ಮುನ್ನವೆ ನನಗೆ ಮೇಡಂ ಅವರ ಪರಿಚಯ ಆಗಿತ್ತು ಅಂತ ಹೇಳಲು ಹೆಮ್ಮೆಯಾಗುತ್ತದೆ. ಅವರು ನಮ್ಮ ಕುಟುಂಬದ ಸ್ನೇಹಿತರಿದ್ದಂತೆ.. ನನಗೆ ಅವರ ಮನೆಗೆ ಹೋಗುವ ಭಾಗ್ಯವೂ ಸಿಕ್ಕಿತ್ತು ಅದೂ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕುವ ಮುನ್ನವೇ :) ಆಗ ಅವರು ಈ ಕಾಲೇಜಿನ ಬಗ್ಗೆ, ಹಾಸ್ಟೆಲಿನ ಬಗ್ಗೆ ಹಾಗು ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದರು. ಇದು ನನಗೆ ಆಯ್ಕೆಮಾಡಲು ಸಹಾಯ ಮಾಡಿತ್ತು ಹಾಗು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಇದೇ ಕಾರಣಕ್ಕೋ ಏನೊ ಅವರೆಂದರೆ ಅದೆಂತದೊ ಗೌರವಾನ್ವಿತ ಬಾಂಧವ್ಯ.

ಇವರು ನನ್ನ ಎಲ್ಲ ಕಷ್ಟಕಾಲದಲ್ಲೂ/ಸಹಾಯದ ಅವಶ್ಯಕತೆಯಿದ್ದಾಗ ಮಾರ್ಗದರ್ಶನ ನೀಡಿದ್ದಾರೆ. ಮತ್ತೊಂದು ಮುಖ್ಯವಾದ ವಿಷಯವಂದರೆ ಅವರ ಬಳಿ ಯಾರೇ ಹೋದರೂ ಅವರಿಗೆ ನಕಾರಾತ್ಮಕ ಪ್ರತಿಕ್ರಿಯೆ ಸಿಗುವುದಿಲ್ಲ :)

ಅದೇನೊ ಹೇಳುತ್ತಾರಲ್ಲ 'ಒಂದನ್ನು ಪಡೆಯಬೇಕಾದರೆ ಒಂದನ್ನು ತ್ಯಜಿಸಬೇಕು" ಇದನ್ನೆ ನಮ್ಮ ಮೇಡಂ ಮಾಡುತ್ತಿರುವುದು... ಅವರ ಭವಿಷ್ಯದ ಯೋಜನೆಗಳಿಗೆ ಶುಭವಾಗಲಿ.. ನಿಮ್ಮನ್ನು ತುಂಬಾ ಮಿಸ್-ಮಾಡಿಕೊಳ್ಳುತ್ತೇವೆ ಮೇಡಂ...


ಕೊನೆಯದಾಗಿ.. ಈ ಕಾರ್ಯಕ್ರಮ ಯಶಸ್ವಿಯಾಗಲು ಮುಖ್ಯ ಪಾತ್ರವಹಿಸಿದ ನನ್ನ ಒಲುಮೆಯ ಸ್ನೇಹಿತರಾದ ಗಿರಿ, ರೋಜೀನಾ,ಕ್ರಿಸ್ತೋಫರ್ ಮತ್ತು ನಮ್ಮ ತರಗತಿಯ ಮುಖ್ಯ-ಶಿಕ್ಷಕರಾದ 'ಕಣವಿ ಸರ್' ಅವರಿಗೆ ಹೃತ್ಪೂರ್ವಕ ದನ್ಯವಾದಗಳು..

Monday, 13 February 2012

ಪ್ರೀತಿ


          ಪ್ರೀತಿ
=======================
ಮೋಜಿನ ಸಂಗತಿಯಲ್ಲ ಈ ಪ್ರೀತಿ
ಭಾವನೆಗಳ ಸಂಗಮವಾಗಬೇಕು ವಿಶೇಷ ರೀತಿ
ಪ್ರೀತಿ ಕುರುಡು ಎನ್ನುವುದು ಪ್ರತೀತಿ
ಪ್ರೀತಿಸುವವರು ಕುರುಡರಲ್ಲ ಇದು ನಿಜಸ್ಥಿತಿ


ನಮಗೆ ಅನ್ನಿಸುತ್ತದೆ 'ಇವಳು ಬೇಕು, ಇವಳು ಬೇಕು'
ಆದರೆ ದೇವರು ನಮಗೆ ಕೊಟ್ಟಿದ್ದಾನೆ
ನಾವು ಅದನ್ನು ಉಪಯೋಗಿಸಬೇಕು..?
ಅದೇ ಸಹನೆ,ಯೋಚನೆ..
ಹಳ್ಳಕ್ಕೆ ಬೀಳಬಾರದು ದುಡುಕಿ

ಕೆಲ ಸಮಯದ ನಂತರ
ನೀವು ಯೋಚನೆ ಮಾಡಿದರೆ
ನಾನು ಪ್ರೀತಿ ಮಾಡಿದ್ದೆ ಇಂತಿಪ..
ಆಗ ನಿಮಗಾಗಬಾರದು ಪಶ್ಛಾತಾಪ!

ಬದಲಾಗಿ ಸಾರ್ಥಕವೆನಿಸಿದರೆ
ಜೀವನ ಎಷ್ಟು ಸುಂದರ

ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ
ಪ್ರೀತಿಮಾಡುವ ಮುನ್ನ ಅನುಮಾನಿಸಿ
ಆದರೆ ಪ್ರೀತಿಯಲ್ಲಿ ಅನುಮಾನ ಬೇಡ

ಅಪ್ರಾಪ್ತ ಪ್ರೀತಿ??


ಒಂದು ವರ್ಷದ ಹಿಂದೆ
ನೀನೆ ನನ್ನ ಬಳಿ ಬಂದೆ
ಪ್ರೀತಿ-ಪ್ರೇಮ ಮಾಡೋಣ ಅಂದೆ
ನಾನು:ಈಗಲೇ ಇದೆಲ್ಲ ಬೇಡವೆಂದೆ
ನೀನಂದೆ
"ನಿನ್ನ ಬಿಟ್ಟು ಬೇರಾರಿಗೂ ನೀಡುವುದಿಲ್ಲ
ಕುತ್ತಿಗೆ,! ತಾಳಿ ಕಟ್ಟಲು..
ನೀನು ಇಲ್ಲ ಅಂದರೆ
ನಾನು ಜೀವಂತ ಉಳಿಯುವುದಿಲ್ಲ
ನಿನ್ನ ಜೊತೆ ಮಾತನಾಡಲು.."
ನೀ ಆಡಿದೆ ಈ ಪರಿ
ನನಗೆ ಆಯಿತು ಗಾಬರಿ!
ನನಗೆ ಗೊತ್ತಿಲದೆಯೇ ಒಪ್ಪಿಕೊಂಡೆ
ಹುಚ್ಛು ಪ್ರೀತಿಗೆ ಜಾರಿಕೊಂಡೆ
ಪ್ರೀತಿಸಲು ಹೋಗಿ ನನ್ನ ಅಸ್ತಿತ್ವ ಕಳೆದುಕೊಂಡೆ
ಅಮ್ಮನ ಹತ್ರ ಬೈಸಿಕೊಂಡೆ






ಆದರೆ ಆಮೇಲೇನಾಯಿತು ನಿನಗೆ?
ಯಾಕೆ ದೂರಮಾಡಿದೆ ನನ್ನನ್ನು...
ಕಾರಣವನ್ನೂ ಕೊಡದೇ..
"ದೂರ ಹೋಗು..ದೂರ ಹೋಗು"
ಎಂದು ಹೊರದಬ್ಬಿದೆಯಲ್ಲ...
ನಾನೇನು ಮಾಡಿದ್ದೆ ನಿನಗೆ?
೨-೩ ತಿಂಗಳ ನಂತರವೆ
ನಾನು ನಿನ್ನನ್ನು ಸಂಪೂರ್ಣ ಮರೆತಿರುವೆ
ಈಗೇಕೆ ಹಿಂದೆ ಹಿಂದೆ ಬರುತ್ತಿರುವೆ??
ನನ್ನ ಪ್ರಾಣ ಹಿಂಡುತ್ತಿರುವೆ..
ಅಮ್ಮನ ಮಾತನ್ನೂ ನಿರ್ಲಕ್ಷಿಸಿ
ನೋವನ್ನು ಅನುಭವಿಸಿ
ಹುಚ್ಚನಂತೆ ನಿನ್ನನ್ನು ಪ್ರೀತಿಸಿ
ನನ್ನ ಭವಿಷ್ಯವನ್ನು ಕೆಡಿಸಿಕೊಂಡೆನಲ್ಲ....
ನಿನ್ನನ್ನು ತುಂಬಾ ನಂಬಿದ್ದೆ
ನಿನ್ನ ಬಗ್ಗೆ ತಿಳಿಯದೆ
ಹೌದು ತಪ್ಪೆಲ್ಲಾ ನನ್ನದೆ
ನಿನ್ನನ್ನು ದೂರಿ ಪ್ರಯೋಜನವೇನಿದೆ..
ಸ್ನೇಹಿತರೆ.. ಮೊದಲ ಬಾರಿಗೆ ಉದ್ದದ ಕವನವನ್ನು ಪ್ರಯತ್ನಿಸಿದ್ದೇನೆ ಅದೂ ನನ್ನ ಜೀವನದ ನೈಜ ಘಟನೆಯೊಂದಿಗೆ...
                
ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿ, ಪ್ರೋತ್ಸಾಹಿಸಿ....
                                                           
                                                                    -ಶಿಶಿರ್

Friday, 10 February 2012

ಮನುಷ್ಯ.. ನೀನ್ಯಾಕೆ ಹೀಗೆ??









ಜಗತ್ತನ್ನು ಅರಿಯುವ ಮುನ್ನವೆ
ಮಣ್ಣಿಗೆ ಸೇರಿದವೇ!
ಮಕ್ಕಳನ್ನು ಹಿಸುಕಿಹಾಕಿದೆಯಾ
ನಿನಗೆ ಮನುಷ್ಯತ್ವ ಇಲ್ಲವೇನಯ್ಯಾ

ಕೇವಲ ನೀನು ಬದುಕಿದರೆ ಸಾಕೇ??
ಮುಗ್ಧರನ್ನು ಬಲಿಕೊಟ್ಟೆಯಾ ನಿನ್ನ ಸ್ವಾರ್ಥಕ್ಕೆ??
ನಿನ್ನ ಪ್ರಾಣವನ್ನು ಬಲಿಕೊಡಲಿಲ್ಲ ಏಕೆ?
ಮಕ್ಕಳು ದೇವರ ಸಮಾನ.. ಜೋಕೆ!!


[ಚಿತ್ರ: ಮಂಜುನಾಥ ರೆಡ್ಡಿ,(ದನ್ಯವಾದಗಳು ಸರ್)]

Tuesday, 7 February 2012

ಸದನದಲ್ಲಿ ಕಾಮಾಯಣ


ಛೀ...ಛೀ...ಛೀ....

ಇದಕ್ಕಿಂತ ಅಸಹ್ಯವಾದ ವಿಷಯ ಬಹುಶಹ ಇರಲಿಕ್ಕಿಲ್ಲ....

ಸದನದಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುವಾಗ, ಕಾಮವನ್ನು ವೀಕ್ಷಿಸುವುದೆ..??
ಛೆ..ಹೇಳಲೂ ಅಸಹ್ಯವಾಗುತ್ತದೆ.. ಬಿಜೆಪಿ ಪಕ್ಷದ ನೈತಿಕತೆ ಎಲ್ಲಿ ಹೋಯಿತು???
ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದೆವಲ್ಲ ಅವರ ಚಪ್ಪಲಿಯಿಂದ ನಮಗೆ ನಾವೆ ಹೊಡೆದುಕೊಳ್ಳಬೇಕು ಎನ್ನುವಂತಹ ಭಾವ ಕಾಡುತ್ತಿದೆ..
ಅವರಿಗೆ ಅಷ್ಟೊಂದು ದುರಹಂಕಾರವೆ??? ಅವರು ಏನು ಮಾಡಿದಾರೂ ಕರ್ನಾಟಕದ ಜನತೆ ಕ್ಷಮಿಸುತ್ತಾರೆ ಅಂತಲೇ?? ಅಥವಾ ಹಿರಿಯಣ್ಣರ 'ಸಾಥ್' ಇದೆ ಅಂತ .??

ಇಂತಹ ಘಟನೆ ನಡೆಯುವುದರಿಂದ ಅವರಿಗೆ ಕೆಟ್ಟ ಹೆಸರು ಬರುವುದಲ್ಲದೆ.. ಕರ್ನಾಟಕ ರಾಜ್ಯಕ್ಕೆ , ರಾಜ್ಯದ ಜನತೆಗೆ ಸಹ ಕೆಟ್ಟ ಹೆಸರು.. ಅಲ್ಲ ಸ್ವಾಮಿ.. ರಾಜ್ಯ ಅಥವಾ ರಾಜ್ಯದ ಜನತೆ ಏನು ತಪ್ಪು ಮಾಡಿದೆ ಅಂತ.. ಎಲ್ಲೊ ಕೆಲವು ಜನ ಮಾಡುವ ಘೋರ ತಪ್ಪುಗಳಿಂದ ವಿಶ್ವ ಮಟ್ಟದಲ್ಲಿ ಇಡೀ ರಾಜ್ಯಕ್ಕೆ ಕಪ್ಪು ಮಸಿ.. :(

ಇದಕ್ಕೆ ಪರಿಹಾರ ಏಕೆ ಇಲ್ಲ..?? ಕೆಲವು ಸಂದರ್ಭದಲ್ಲಿ ಆರೋಪಿ ಶಾಸಕರಿಗೆ ಅವರ ಹುದ್ದೆಯಲ್ಲಿ 'ಬಡ್ತಿ" ನೀಡಿದ ಉದಾಹರಣೆಯೂ ಇದೆ ಅಂದರೆ ಎಷ್ಟರ ಮಟ್ಟಿಗೆ ವ್ಯವಸ್ಥೆ ಕೆಟ್ಟಿದೆ ಅಂತ ಊಹಿಸಬಹುದು..
ಇಂದು ನಡೆದ ಘಟನೆಯಂತೂ ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ  ದುರಂತ.. ಇದಕ್ಕೂ ಏನು ಕ್ರಮ ಕೈಗೋಂಡಿಲ್ಲ ಅಂತ ಆದರೆ, ಇದಕ್ಕೆ ಪರಿಹಾರ ದೇವರೆ ಬಲ್ಲ...

ಇನ್ನು ಶಿಕ್ಷೆ ನೀಡಿದರೂ ಸಹ ಅದು ಎಷ್ಟರಮಟ್ಟಿಗೆ ಇರುತ್ತದೆ ಅಂದರೆ ಅವರ ಕೂದಲು ಸಹ ಅಲುಗಾಡುವುದಿಲ್ಲ.. ಹೆಚ್ಚೆಂದರೆ ಅವರನ್ನು ಹುದ್ದೆಯಿಂದ ತೆಗೆದು ಹಾಕಬಹುದು... ಇದರಿಂದ ಪ್ರಯೋಜನವೇನು, ಅವರಿಗೆ ತಪ್ಪಿನ ಅರಿವಾಗುವುದಿಲ್ಲ..ಮುಂದಿನ ಸಂಪುಟದಲ್ಲಿ ಮೊದಿಲಿಗಿಂತ ಹೆಚ್ಚಿನ ಹುದ್ದೆ ನೀಡಿ ನ್ಯಾಯ,ನೀತಿಗೆ ಕೊಡಲಿ ಪೆಟ್ಟು ಕೊಡುತ್ತಾರೆ..

ಇಂತಹ ಘಟನೆಗಳ ಬಗೆ ಸರಿಯಾದ ಕ್ರಮ ಕೈಗೊಳ್ಳದೇ ಇದ್ದರೆ ರಾಜ್ಯದ ಜನತೆಯೇ ಪಾಠ ಕಲಿಸುವುದರಲ್ಲಿ ಯಾವುದೆ ಅನುಮಾನವಿಲ್ಲ...


ಇನ್ನು ಸಿ.ಸಿ.ಪಾಟಿಲ್ ಅವರು ಕೊಟ್ಟ ಸಮಜಾಯಶಿ...

ಸಚಿವ ಸವದಿ ಅವರ ಮೊಬೈಲಿಗೆ 'ಬ್ಲೂಟೂತ್' ಮೂಲಕ ಸಂದೇಶವೊಂದು ಬರುತ್ತದೆ. ಅದರಲ್ಲಿ 'ರೆವುಯಿಸಂ' ಬಗ್ಗೆ ವರದಿ ಇತ್ತು. 'ಇರಾನ್' ದೇಶದಲ್ಲಿ ನಡೆದ ಅತ್ಯಾಚರ ಹಾಗೂ ಅತ್ಯಾಚಾರವೆಸಗಿದ ೭ ಜನರನ್ನು ಬಂಧಿಸಿದರ ಬಗ್ಗೆ ವರದಿ ಬಂದಿತ್ತು.. ಅವರು ಅದನ್ನು ನೋಡುತ್ತಿದ್ದರು, 'ಇಂತದ್ದನ್ನೆಲ್ಲ ಸದನದಲ್ಲಿ ನೋಡಬೇಡಿ' ಅಂತ ಹೇಳಿ ಬಂದುಮಾಡಿಸಿದೆ ಅಂತ ಮಾನ್ಯ್ ಪಾಟೀಲರು ಹೇಳುತ್ತಾರೆ!!
ಖಾಸಗಿ ವಾಹಿನಿಯೊಂದು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತ್ತಾರೆ...'ಬೇರೆ ವಾಹಿನಿಯಲ್ಲಿ ನೋಡಿ ಅದರಲ್ಲಿ ನಾನು ಮೊಬೈಲ್ ಬಂದುಮಾಡಿಸಿದ ದೃಶ್ಯಗಳು ಪ್ರಸಾರವಾಗುತ್ತಿದೆ ಹಾಗಾಗಿ ಇದು ಸತ್ಯಕ್ಕೆ ದೂರವಾದದು..' ಇಷ್ಟೊಂದು ಬೇಜಾವಾಬ್ದಾರಿತನವೇ??? ಅಲ್ಲ ಅವರು ಏನು ಹೇಳುತ್ತಿದ್ದಾರೆಂದು ಅವರಿಗಾದರು ಗೊತ್ತಿದ್ಯಾ??? ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆ ಯಾವುದೊ ದೇಶದ ಹೆಸರು ಕೆಡಿಸುವುದು ಎಷ್ಟು ಸರಿ, ಅಥವಾ 'ಅತ್ಯಾಚಾರ' ಎಂಬತಹ ವಿಷಯವ ಅವರ ಬಾಯಲ್ಲಿ ಬಂದಿರಬೇಕಾದರೆ ಅವರ ಮನಸ್ಥಿತಿ ಎಂತದು ಎಂದು ತಿಳಿದುಬರುತ್ತದೆ


ಯಾವಾಗ ಬುದ್ಧಿ ಕಲಿಯುತ್ತಾರೊ?? ನಮಗೆ ಯಾವಾಗ ಸುಯೋಗ ಬರುತ್ತದೆಯೊ???