ಒಂದು ವರ್ಷದ ಹಿಂದೆ
ನೀನೆ ನನ್ನ ಬಳಿ ಬಂದೆ
ಪ್ರೀತಿ-ಪ್ರೇಮ ಮಾಡೋಣ ಅಂದೆ
ನಾನು:ಈಗಲೇ ಇದೆಲ್ಲ ಬೇಡವೆಂದೆ
ನೀನಂದೆ
"ನಿನ್ನ ಬಿಟ್ಟು ಬೇರಾರಿಗೂ ನೀಡುವುದಿಲ್ಲ
ಕುತ್ತಿಗೆ,! ತಾಳಿ ಕಟ್ಟಲು..
ನೀನು ಇಲ್ಲ ಅಂದರೆ
ನಾನು ಜೀವಂತ ಉಳಿಯುವುದಿಲ್ಲ
ನಿನ್ನ ಜೊತೆ ಮಾತನಾಡಲು.."
ನೀ ಆಡಿದೆ ಈ ಪರಿ
ನನಗೆ ಆಯಿತು ಗಾಬರಿ!
ನನಗೆ ಗೊತ್ತಿಲದೆಯೇ ಒಪ್ಪಿಕೊಂಡೆ
ಹುಚ್ಛು ಪ್ರೀತಿಗೆ ಜಾರಿಕೊಂಡೆ
ಪ್ರೀತಿಸಲು ಹೋಗಿ ನನ್ನ ಅಸ್ತಿತ್ವ ಕಳೆದುಕೊಂಡೆ
ಅಮ್ಮನ ಹತ್ರ ಬೈಸಿಕೊಂಡೆ
ಯಾಕೆ ದೂರಮಾಡಿದೆ ನನ್ನನ್ನು...
ಕಾರಣವನ್ನೂ ಕೊಡದೇ..
"ದೂರ ಹೋಗು..ದೂರ ಹೋಗು"
ಎಂದು ಹೊರದಬ್ಬಿದೆಯಲ್ಲ...
ನಾನೇನು ಮಾಡಿದ್ದೆ ನಿನಗೆ?
೨-೩ ತಿಂಗಳ ನಂತರವೆ
ನಾನು ನಿನ್ನನ್ನು ಸಂಪೂರ್ಣ ಮರೆತಿರುವೆ
ಈಗೇಕೆ ಹಿಂದೆ ಹಿಂದೆ ಬರುತ್ತಿರುವೆ??
ನನ್ನ ಪ್ರಾಣ ಹಿಂಡುತ್ತಿರುವೆ..
ಅಮ್ಮನ ಮಾತನ್ನೂ ನಿರ್ಲಕ್ಷಿಸಿ
ನೋವನ್ನು ಅನುಭವಿಸಿ
ಹುಚ್ಚನಂತೆ ನಿನ್ನನ್ನು ಪ್ರೀತಿಸಿ
ನನ್ನ ಭವಿಷ್ಯವನ್ನು ಕೆಡಿಸಿಕೊಂಡೆನಲ್ಲ....
ನಿನ್ನನ್ನು ತುಂಬಾ ನಂಬಿದ್ದೆ
ನಿನ್ನ ಬಗ್ಗೆ ತಿಳಿಯದೆ
ಹೌದು ತಪ್ಪೆಲ್ಲಾ ನನ್ನದೆ
ನಿನ್ನನ್ನು ದೂರಿ ಪ್ರಯೋಜನವೇನಿದೆ..
ಸ್ನೇಹಿತರೆ.. ಮೊದಲ ಬಾರಿಗೆ ಉದ್ದದ ಕವನವನ್ನು ಪ್ರಯತ್ನಿಸಿದ್ದೇನೆ ಅದೂ ನನ್ನ ಜೀವನದ ನೈಜ ಘಟನೆಯೊಂದಿಗೆ...
ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿ, ಪ್ರೋತ್ಸಾಹಿಸಿ....
-ಶಿಶಿರ್
ನಿಮ್ಮ ಕನವರಿಕೆ ಕವಿತಗೆ ಜೀವ ನೀಡಿರುವುದು.ಕವಿತೆಗೆ ಇನ್ನೂ ಪಕ್ವತೆ ನೀಡಬಹದಾಗಿದೆ.ಪದಗಳು ಲಾಲಿತ್ಯ ಹಾಡುವಂತಿರಬೇಕು.ಅದಕ್ಕೆ ಓದು ಮತ್ತು ಆಸ್ವಾದನೆಯೇ ಮದ್ದು.ಈ ಬ್ಲಾಗಿನಲ್ಲಿ ಸದಾ ಸಕ್ರೀಯವಾಗಿದ್ದು ಅದನ್ನು ಸಾಧಿಸಬುದಾಗಿದೆ ಗೆಳೆಯರೇ.ನನಗೆ ನಿಮ್ಮ ನೈಜತೆಯ ಈ ಕವಿತೆ ಇಷ್ಟವಾಯಿತು.ಶುಭವಾಗಲಿ.
ReplyDeleteಚೆನ್ನಾಗಿದೆ ಕವಿತೆಯ ಭಾವ. ಸುಂದರವಾಗಿ ಪ್ರತಿಮೆ ಕೆತ್ತಬಲ್ಲೀರಿ. ಶುಭವಾಗಲಿ.
ReplyDeleteನಿಮ್ಮ ಸಾಲುಗಳಲ್ಲಿ ಭಾವನೆ ತುಂಬಿದೆ
ReplyDelete