ಯುತ್ ಕಾಂಗ್ರೆಸ್'ನ ಪ್ರತಿಭಟನೆ...!!???
ಅಲ್ಲಾ ಸ್ವಾಮಿ ಇವರಿಗೇನು ಬೇರೆ ಕೆಲಸ ಇಲ್ವಾ... ಬಿಜೇಪಿಯವರೂ ಏನೆ ಮಾಡಿದರೂ ಇವರಿಗೆ ಸಹಿಸಲು ಆಗುವುದಿಲ್ಲ! ವಿರೋಧ ಪಕ್ಷ ಅಂದ ಮಾತ್ರಕ್ಕೆ, ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸಿವುದು ಇವರ ಕೆಲಸವಲ್ಲ.. ಬಿಜೆಪಿಯವರು ಮಾಡುವುದು ತಪ್ಪೋ ಸರಿಯೋ ಅದು ಬೇರೆ ಮಾತು ಆದರೆ ಅದನ್ನು ವ್ಯಕ್ತಪಡಿಸಲು ಒಂದು ರೀತಿ ಇರುತ್ತದೆ ಅಲ್ಲವಾ..
ಈಗ ನೋಡಿ ಬಿಜೆಪಿಯ 'ಕೃಷ್ಣಯ್ಯ ಶೆಟ್ಟಿ' ಅವರ ಗಂಗಾಜಲ ವಿತರಣೆ ಹಾಗು 'ಯಡಿಯೂರಪ್ಪ'ನವರ ಕಾಶಿ ಯಾತ್ರೆಯ ಬಗ್ಗೆ ಅಣಕ ಮಾಡುತ್ತಿದ್ದಾರೆ..
ಒಂದು ವಾಹನದ ಮೇಲೆ ಯಡಿಯೂರಪ್ಪನವರ ಭಾವಚಿತ್ರವನ್ನು ಇಟ್ಟು..ಕೃಷ್ಣಯ್ಯ ಶೆಟ್ಟಿ ಅವರ ವೇಷಧಾರಿಯೊಬ್ಬರು ಒಂದು ದೊಡ್ಡ ಬಿಸ್ಲೆರಿ ಡಬ್ಬಿಯನ್ನು ಹಿಡಿದುಕೊಂಡು ಯಡಿಯೂರಪ್ಪನವರ ಭಾವಚಿತ್ರದ ಮೇಲೆ ಮೇಲೆ ನೀರು ಸುರಿಯುತ್ತಿದ್ದಾರೆ..!
ಅವರ ವಾದವೇನು ಗೊತ್ತೆ.. ಕೃಷ್ಣಯ್ಯ ಶೆಟ್ಟಿ ಅವರು ಗಂಗಾಜಲವನ್ನು ಜನರಿಗೆ ಹಂಚಿ ಅದನ್ನು ಅಪವಿತ್ರಗೊಳಿಸುತ್ತಿದ್ದಾರಂತೆ... ಯಡಿಯೂರಪ್ಪನವರು ಅಷ್ಟು ದೂರದವರೆಗೆ ಹೋಗುವುದನ್ನು ಬಿಟ್ಟು ಕೃಷ್ಣಯ್ಯ ಶೆಟ್ಟಿ ಅವರ ಗಂಗಾಜಲದಲ್ಲಿ ಸ್ನಾನಮಾಡಿದರೆ ಸಾಕಾಗಿತ್ತಂತೆ..
ಇದೇನಾ ಅವರಲ್ಲಿರುವ ಪವಿತ್ರತೆ ಅಥವಾ ಇದೇನಾ ಅವರು ತೋರುವ ಗೌರವ ಶ್ರೀಕ್ಷೆತ್ರಕ್ಕೆ..??
ಇನ್ನು ಮುಂದಾಗಿ.. ಕರ್ನಾಟಕದಲ್ಲಿ ನೀರಿಗೆ ಬರವಂತೆ ಹಾಗಾಗಿ ಕೃಷ್ಣಯ್ಯ ಶೆಟ್ಟಿ ಅವರು ನೀರನ್ನು ಹಾಳುಮಾಡಬಾರದಂತೆ.. ಮೊದಲನೆಯದಾಗಿ ಒಂದು ಹನಿ ಗಂಗಾಜಲ ಹಂಚುವುದರಿಂದ ಕರ್ನಾಟಕದ ಜನರಿಗೆ ಏನು ನಷ್ಟವೋ ನಾ ಕಾಣೆ.. ಮೇಲಾಗಿ ಕರ್ನಾಟಕದಲ್ಲಿ ನೀರಿಲ್ಲ ನೀರಿಲ್ಲ ಎಂದುಕೊಂಡೆ ಇವರು ನೀರನ್ನು ಚೆಲ್ಲಿ ಹಾಳುಮಾಡುತ್ತಿದ್ದಾರಲ್ಲ.. ಏನು ಹೇಳಬೇಕು ಇವರಿಗೆ..???
''ಬೇರೆಯವರ್ ತಪ್ಪನ್ನು ಕಂಡುಹಿಡಿಯುವಲ್ಲಿ ನಾವು ಎಷ್ಟು ಸಮಯವನ್ನು ವ್ಯರ್ಥಮಾಡುತ್ತೇವೋ ಅದರ ಕಾಲುಭಾಗದಷ್ಟು ಸಮಯವನ್ನು ನಮ್ಮನ್ನು ನಾವು ತಿದ್ದಿಕೊಳ್ಳುವಲ್ಲಿ ಉಪಯೋಗಿಸಿಕೊಂಡರೆ ಜಗತ್ತಿನ್ನಲ್ಲಿ ಬಹಳಷ್ಟು ಒಳಿತನ್ನು ಕಾಣಬಹುದು...
No comments:
Post a Comment