ನಮ್ಮ ಮೇಡಂ (ಉಪ ವ್ಯವಸ್ಥಾಪಕರು:ಟ್ರೇನಿಂಗ್ ವಿಭಾಗ) ಇವರಿಗೆ ಬೇರೆ ನೌಕರಿ ಸಿಕ್ಕಿದ್ದರಿಂದ ಬೆಂಗಳೂರಿನೆಡೆಗೆ ಪ್ರಯಾಣ ಬೆಳೆಸಲಿದ್ದಾರೆ, ನಾವು ಇಂದು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟೆವು..ನಮ್ಮೆಲ್ಲರ ಮನಸಲ್ಲಿ ದುಃಖ ತುಂಬಿತ್ತಾದರೂ ನಾವೂ ನಗುನಗುತ್ತಲೆ ಬೀಳ್ಕೊಟ್ಟೆವು. ಅವರೂ ನಮಗೆ ಯಾವ ವಿಷಯವನ್ನು ತೆಗೆದುಕೊಳ್ಳದಿದ್ದರೂ ನನಗೆ ತುಬ ಆತ್ಮೀಯವಾಗಿದ್ದರು.. ಅವರೂ ಸಹ ನನ್ನನ್ನು ಆತ್ಮೀಯವಾಗಿ ಕಾಣುತ್ತಿದ್ದರು
ನಾನು ಈ ಕಾಲೇಜಿಗೆ ಸೇರಲು ಪ್ರವೇಶ ಪರೀಕ್ಷೆ ಬರೆಯುವ ಮುನ್ನವೆ ನನಗೆ ಮೇಡಂ ಅವರ ಪರಿಚಯ ಆಗಿತ್ತು ಅಂತ ಹೇಳಲು ಹೆಮ್ಮೆಯಾಗುತ್ತದೆ. ಅವರು ನಮ್ಮ ಕುಟುಂಬದ ಸ್ನೇಹಿತರಿದ್ದಂತೆ.. ನನಗೆ ಅವರ ಮನೆಗೆ ಹೋಗುವ ಭಾಗ್ಯವೂ ಸಿಕ್ಕಿತ್ತು ಅದೂ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕುವ ಮುನ್ನವೇ :) ಆಗ ಅವರು ಈ ಕಾಲೇಜಿನ ಬಗ್ಗೆ, ಹಾಸ್ಟೆಲಿನ ಬಗ್ಗೆ ಹಾಗು ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದರು. ಇದು ನನಗೆ ಆಯ್ಕೆಮಾಡಲು ಸಹಾಯ ಮಾಡಿತ್ತು ಹಾಗು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಇದೇ ಕಾರಣಕ್ಕೋ ಏನೊ ಅವರೆಂದರೆ ಅದೆಂತದೊ ಗೌರವಾನ್ವಿತ ಬಾಂಧವ್ಯ.
ಇವರು ನನ್ನ ಎಲ್ಲ ಕಷ್ಟಕಾಲದಲ್ಲೂ/ಸಹಾಯದ ಅವಶ್ಯಕತೆಯಿದ್ದಾಗ ಮಾರ್ಗದರ್ಶನ ನೀಡಿದ್ದಾರೆ. ಮತ್ತೊಂದು ಮುಖ್ಯವಾದ ವಿಷಯವಂದರೆ ಅವರ ಬಳಿ ಯಾರೇ ಹೋದರೂ ಅವರಿಗೆ ನಕಾರಾತ್ಮಕ ಪ್ರತಿಕ್ರಿಯೆ ಸಿಗುವುದಿಲ್ಲ :)
ಅದೇನೊ ಹೇಳುತ್ತಾರಲ್ಲ 'ಒಂದನ್ನು ಪಡೆಯಬೇಕಾದರೆ ಒಂದನ್ನು ತ್ಯಜಿಸಬೇಕು" ಇದನ್ನೆ ನಮ್ಮ ಮೇಡಂ ಮಾಡುತ್ತಿರುವುದು... ಅವರ ಭವಿಷ್ಯದ ಯೋಜನೆಗಳಿಗೆ ಶುಭವಾಗಲಿ.. ನಿಮ್ಮನ್ನು ತುಂಬಾ ಮಿಸ್-ಮಾಡಿಕೊಳ್ಳುತ್ತೇವೆ ಮೇಡಂ...
ಕೊನೆಯದಾಗಿ.. ಈ ಕಾರ್ಯಕ್ರಮ ಯಶಸ್ವಿಯಾಗಲು ಮುಖ್ಯ ಪಾತ್ರವಹಿಸಿದ ನನ್ನ ಒಲುಮೆಯ ಸ್ನೇಹಿತರಾದ ಗಿರಿ, ರೋಜೀನಾ,ಕ್ರಿಸ್ತೋಫರ್ ಮತ್ತು ನಮ್ಮ ತರಗತಿಯ ಮುಖ್ಯ-ಶಿಕ್ಷಕರಾದ 'ಕಣವಿ ಸರ್' ಅವರಿಗೆ ಹೃತ್ಪೂರ್ವಕ ದನ್ಯವಾದಗಳು..
No comments:
Post a Comment