ಛೀ...ಛೀ...ಛೀ....
ಇದಕ್ಕಿಂತ ಅಸಹ್ಯವಾದ ವಿಷಯ ಬಹುಶಹ ಇರಲಿಕ್ಕಿಲ್ಲ....
ಸದನದಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುವಾಗ, ಕಾಮವನ್ನು ವೀಕ್ಷಿಸುವುದೆ..??
ಛೆ..ಹೇಳಲೂ ಅಸಹ್ಯವಾಗುತ್ತದೆ.. ಬಿಜೆಪಿ ಪಕ್ಷದ ನೈತಿಕತೆ ಎಲ್ಲಿ ಹೋಯಿತು???
ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದೆವಲ್ಲ ಅವರ ಚಪ್ಪಲಿಯಿಂದ ನಮಗೆ ನಾವೆ ಹೊಡೆದುಕೊಳ್ಳಬೇಕು ಎನ್ನುವಂತಹ ಭಾವ ಕಾಡುತ್ತಿದೆ..
ಅವರಿಗೆ ಅಷ್ಟೊಂದು ದುರಹಂಕಾರವೆ??? ಅವರು ಏನು ಮಾಡಿದಾರೂ ಕರ್ನಾಟಕದ ಜನತೆ ಕ್ಷಮಿಸುತ್ತಾರೆ ಅಂತಲೇ?? ಅಥವಾ ಹಿರಿಯಣ್ಣರ 'ಸಾಥ್' ಇದೆ ಅಂತ .??
ಇಂತಹ ಘಟನೆ ನಡೆಯುವುದರಿಂದ ಅವರಿಗೆ ಕೆಟ್ಟ ಹೆಸರು ಬರುವುದಲ್ಲದೆ.. ಕರ್ನಾಟಕ ರಾಜ್ಯಕ್ಕೆ , ರಾಜ್ಯದ ಜನತೆಗೆ ಸಹ ಕೆಟ್ಟ ಹೆಸರು.. ಅಲ್ಲ ಸ್ವಾಮಿ.. ರಾಜ್ಯ ಅಥವಾ ರಾಜ್ಯದ ಜನತೆ ಏನು ತಪ್ಪು ಮಾಡಿದೆ ಅಂತ.. ಎಲ್ಲೊ ಕೆಲವು ಜನ ಮಾಡುವ ಘೋರ ತಪ್ಪುಗಳಿಂದ ವಿಶ್ವ ಮಟ್ಟದಲ್ಲಿ ಇಡೀ ರಾಜ್ಯಕ್ಕೆ ಕಪ್ಪು ಮಸಿ.. :(
ಇದಕ್ಕೆ ಪರಿಹಾರ ಏಕೆ ಇಲ್ಲ..?? ಕೆಲವು ಸಂದರ್ಭದಲ್ಲಿ ಆರೋಪಿ ಶಾಸಕರಿಗೆ ಅವರ ಹುದ್ದೆಯಲ್ಲಿ 'ಬಡ್ತಿ" ನೀಡಿದ ಉದಾಹರಣೆಯೂ ಇದೆ ಅಂದರೆ ಎಷ್ಟರ ಮಟ್ಟಿಗೆ ವ್ಯವಸ್ಥೆ ಕೆಟ್ಟಿದೆ ಅಂತ ಊಹಿಸಬಹುದು..
ಇಂದು ನಡೆದ ಘಟನೆಯಂತೂ ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ ದುರಂತ.. ಇದಕ್ಕೂ ಏನು ಕ್ರಮ ಕೈಗೋಂಡಿಲ್ಲ ಅಂತ ಆದರೆ, ಇದಕ್ಕೆ ಪರಿಹಾರ ದೇವರೆ ಬಲ್ಲ...
ಇನ್ನು ಶಿಕ್ಷೆ ನೀಡಿದರೂ ಸಹ ಅದು ಎಷ್ಟರಮಟ್ಟಿಗೆ ಇರುತ್ತದೆ ಅಂದರೆ ಅವರ ಕೂದಲು ಸಹ ಅಲುಗಾಡುವುದಿಲ್ಲ.. ಹೆಚ್ಚೆಂದರೆ ಅವರನ್ನು ಹುದ್ದೆಯಿಂದ ತೆಗೆದು ಹಾಕಬಹುದು... ಇದರಿಂದ ಪ್ರಯೋಜನವೇನು, ಅವರಿಗೆ ತಪ್ಪಿನ ಅರಿವಾಗುವುದಿಲ್ಲ..ಮುಂದಿನ ಸಂಪುಟದಲ್ಲಿ ಮೊದಿಲಿಗಿಂತ ಹೆಚ್ಚಿನ ಹುದ್ದೆ ನೀಡಿ ನ್ಯಾಯ,ನೀತಿಗೆ ಕೊಡಲಿ ಪೆಟ್ಟು ಕೊಡುತ್ತಾರೆ..
ಇಂತಹ ಘಟನೆಗಳ ಬಗೆ ಸರಿಯಾದ ಕ್ರಮ ಕೈಗೊಳ್ಳದೇ ಇದ್ದರೆ ರಾಜ್ಯದ ಜನತೆಯೇ ಪಾಠ ಕಲಿಸುವುದರಲ್ಲಿ ಯಾವುದೆ ಅನುಮಾನವಿಲ್ಲ...
ಇನ್ನು ಸಿ.ಸಿ.ಪಾಟಿಲ್ ಅವರು ಕೊಟ್ಟ ಸಮಜಾಯಶಿ...
ಸಚಿವ ಸವದಿ ಅವರ ಮೊಬೈಲಿಗೆ 'ಬ್ಲೂಟೂತ್' ಮೂಲಕ ಸಂದೇಶವೊಂದು ಬರುತ್ತದೆ. ಅದರಲ್ಲಿ 'ರೆವುಯಿಸಂ' ಬಗ್ಗೆ ವರದಿ ಇತ್ತು. 'ಇರಾನ್' ದೇಶದಲ್ಲಿ ನಡೆದ ಅತ್ಯಾಚರ ಹಾಗೂ ಅತ್ಯಾಚಾರವೆಸಗಿದ ೭ ಜನರನ್ನು ಬಂಧಿಸಿದರ ಬಗ್ಗೆ ವರದಿ ಬಂದಿತ್ತು.. ಅವರು ಅದನ್ನು ನೋಡುತ್ತಿದ್ದರು, 'ಇಂತದ್ದನ್ನೆಲ್ಲ ಸದನದಲ್ಲಿ ನೋಡಬೇಡಿ' ಅಂತ ಹೇಳಿ ಬಂದುಮಾಡಿಸಿದೆ ಅಂತ ಮಾನ್ಯ್ ಪಾಟೀಲರು ಹೇಳುತ್ತಾರೆ!!
ಖಾಸಗಿ ವಾಹಿನಿಯೊಂದು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತ್ತಾರೆ...'ಬೇರೆ ವಾಹಿನಿಯಲ್ಲಿ ನೋಡಿ ಅದರಲ್ಲಿ ನಾನು ಮೊಬೈಲ್ ಬಂದುಮಾಡಿಸಿದ ದೃಶ್ಯಗಳು ಪ್ರಸಾರವಾಗುತ್ತಿದೆ ಹಾಗಾಗಿ ಇದು ಸತ್ಯಕ್ಕೆ ದೂರವಾದದು..' ಇಷ್ಟೊಂದು ಬೇಜಾವಾಬ್ದಾರಿತನವೇ??? ಅಲ್ಲ ಅವರು ಏನು ಹೇಳುತ್ತಿದ್ದಾರೆಂದು ಅವರಿಗಾದರು ಗೊತ್ತಿದ್ಯಾ??? ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆ ಯಾವುದೊ ದೇಶದ ಹೆಸರು ಕೆಡಿಸುವುದು ಎಷ್ಟು ಸರಿ, ಅಥವಾ 'ಅತ್ಯಾಚಾರ' ಎಂಬತಹ ವಿಷಯವ ಅವರ ಬಾಯಲ್ಲಿ ಬಂದಿರಬೇಕಾದರೆ ಅವರ ಮನಸ್ಥಿತಿ ಎಂತದು ಎಂದು ತಿಳಿದುಬರುತ್ತದೆ
ಯಾವಾಗ ಬುದ್ಧಿ ಕಲಿಯುತ್ತಾರೊ?? ನಮಗೆ ಯಾವಾಗ ಸುಯೋಗ ಬರುತ್ತದೆಯೊ???
No comments:
Post a Comment