View My Stats

Monday, 30 January 2012


ನಿನ್ನ ಸನಿಹ ಬಯಸಿ ಬಂದೆ ನಾ
ನಿಂತೆ ಸಾಲಿನಲ್ಲಿ ನಿನ್ನ ಕಾಣಲು
ಬಂದಿತ್ತು ನನ್ನ ಸರದಿ...
ಮೈ ಮರೆತೆ ನಿನ್ನಾನಂದವ ನೋಡುತ
ನೀ ನಡೆದೆ ನಿನ್ನ ಸಂಗಾತಿಯ ಅರೆಸಿ,
ನನ್ನ ದೂಡುತ..
ಈ ಪುಟ್ಟ ಹೃದಯ ಚೂರು ಮಾಡುತ..

Friday, 20 January 2012

ನನ್ನ 'ಜೀವ'ವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ :)




ಆಟೊ ಚಾಲಕರ ಬಗ್ಗೆ ಹೀಗೆಳೆಯುವವರೆ ಜಾಸ್ತಿ. ಸುಲಿಗೆ ಮಾಡುತ್ತಾರೆ,ಒರಟಾಗಿ ನಡೆದುಕೊಳ್ಳುತ್ತಾರೆ, ಹಾಗೆ ಹೀಗೆ ಎಂದು... ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಇದನ್ನು ಸುಳ್ಳು ಎಂದು ಸಾರಿ ಸಾರಿ ಹೇಳುತ್ತಿವೆ.. ಬೆಂಗಳೂರಿನಲ್ಲಿ ಆಟೊ ಚಾಲಕನೊಬ್ಬ ಐದು ಲಕ್ಷ ರೂಪಾಯಿಗಳನ್ನು ಹಿಂದಿರುಗುಸುದ್ದನ್ನು ಕೇಳಿ ಮನತುಂಬಿ ಬಂತು.. ಅದೂ ನಗದು ಹಣವನ್ನು... ಹ್ಯಾಟ್ಸ್ ಆಫ್ಹ್...

ಈಗ ನನ್ನ ವಿಷಯಕ್ಕೆ ಬರೋಣ.. ನನಗೆ ಜೀವಕ್ಕಿಂತಲೂ ಹೆಚ್ಚಾಗಿದ್ದ ಮೊಬೈಲ್ ಫೋನನ್ನು ಆಟೊದಲ್ಲಿ ಕಳೆದುಕೊಂಡು ಮರುಕ್ಷಣದಲ್ಲೆ ಅದು ಸಿಕ್ಕಿತು... ಒಂದುಸಲ ಜೀವ ಹೋಗಿ ಬಂದಂತಾಯಿತು..

ಗೆಳತಿಯ ಗಿಫ್ಟ್..
ಈ ಮೊಬೈಲ್ ದುಡ್ಡಿನ ಲೆಕ್ಕಾಚಾರದಲ್ಲಿ ಅಂತಹ ತುಟ್ಟಿಯದೇನಲ್ಲ. ಎರಡು ಸಾವಿರದ ಒಳಗಿನದೇ.. ಆದರೆ ನನಗೆ ಇದು ಹೃದಯಕ್ಕೆ ಬಹಳ ಹತ್ತಿರವಾದದ್ದು.. ಕಾರಣ..??

ನನ್ನ ಜೀವದ ಗೆಳತಿಯ ಬಗ್ಗೆ ಈ ಹಿಂದೆ ಹೇಳಿದ್ದೆ, ನೆನಪಿರಬಹುದು...  ಹಂ... ಅವಳೆ ಈ ಮೊಬೈಲನ್ನು ನನ್ನ ಜನ್ಮದಿನದಂದು ಕೊಡುಗೆಯಾಗಿ ನೀಡಿದ್ದಳು... ಹಾಗಾಗಿ ಇದು ನನಗೆ ಜೀವನದಲ್ಲಿ ಇದುವರೆಗಿನ ಅತ್ಯಮೂಲ್ಯ ವಸ್ತು..



ಇವತ್ತು (೨೦ / ೧ / ೨೦೧೨) ರಾತ್ರಿ ೮:೩೦ರ ಸುಮಾರಿಗೆ ನಾನು ತಂದೆಯೊಂದಿಗೆ, ನನ್ನ ಅತ್ತೆಯನ್ನು ಪಿಕ್ ಮಾಡಲು ಬಸ್ ಸ್ಟ್ಯಾಂಡಿನ ಕಡೆ ಹೋಗಿದ್ದೆ... ವಾಪಸ್ ಬರುವಾಗ ಆಟೊದಲ್ಲಿ ಹೊರಟ್ವಿ. ದಾರಿಮಧ್ಯದಲ್ಲಿ ನನ್ನ ಮೊಬೈಲ್ ಫ್ಹೋನು ಆಟೊದಲ್ಲೆ ಎಲ್ಲೋ ಬಿದ್ದು ಹೋಗಿದೆ, ನನಗೆ ಗೊತ್ತಗಲಿಲ್ಲ..ಆಮೇಲೆ ಮನೆಗೆ ಬಂದ ನಂತರ ನನ್ನ ಪ್ಯಾಂಟಿನ ಕಿಸೆಯನ್ನು ತಡಕಾಡಿದರೂ ನನ್ನ ಮೊಬೈಲ್ ಸಿಗಲಿಲ್ಲ..ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು.. ಏನು ಮಾಡಬೇಕೊ ತಿಳಿಯಲಿಲ್ಲ.. ನನ್ನ ದುರದೃಷ್ಟಕ್ಕೆ ಆ ಮೊಬೈಲ್ 'ಮನಮೋಹನ್ ಸಿಂಗ್' ಮೋಡ್ ಅಲ್ಲಿ ಇತ್ತು.. ಕೇವಲ ಲೈಟ್ ಬರುತಿತ್ತು ಅಷ್ಟೆ..ಕಂಪನ ಕೂಡ ಆಗುತ್ತಿರಲಿಲ್ಲ..

    ಪ್ರಯತ್ನ ಮಾಡಲೇಬೇಕು ಅಂತ ಮತ್ತೆ ತಿರುಗಿ ಬಸ್ ಸ್ಟ್ಯಾಂಡ್ ಕಡೆ ಹೊರಟೆ ಆ ಆಟೊವನ್ನು ಹುಡುಕಲು.. ನಾನು ನನ್ನ ಇನ್ನೊಂದು ಮೊಬೈಲಿನಿಂದ ಈ ಮೊಬೈಲಿಗೆ ನಿರಂತರವಾಗಿ ಕರೆ ಮಾಡುತ್ತಿದ್ದೆ, ಆದರೆ ಅದು ಪ್ರಯೋಜನ ಇಲ್ಲ ಅಂತ ಅನ್ನಿಸತೊಡಗಿತು..

    ಅದೇ ಸಮಯದಲ್ಲಿ ನನ್ನ ಅಮ್ಮನ ಮೊಬೈಲಿಗೆ ಒಂದು ಅಜ್ನಾತ ಕರೆ ಬಂತು. ಆ ಕಡೆಯಿಂದ ಮಾತನಾಡಿದ ಆ ಪುಣ್ಯಾತ್ಮ ಕೇಳಿದ.. "ನಿಮ್ಮ ಮಗ ಮೊಬೈಲ್ ಕಳೆದುಕೊಂಡಿದ್ದಾನೆಯೆ??" ಅಂತ ಕೇಳಿದ.. ಅದನ್ನು ಕೇಳುತ್ತಿದ್ದಂತೆಯೆ ನಾನು ದಡಬಡಸಿ ಅಮ್ಮನ ಫೋನ್ ತೆಗೆದುಕೊಂಡು ಮಾತಾಡಿದೆ, ಆಗ ಅವನು ಹೇಳಿದ್ದೇನು ಗೊತ್ತೆ..?? "ಸರ್ ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಗುವುದಿಲ್ಲವೆ??, ಅದನ್ನು ನಿಮ್ಮ ಮನೆಗೆ ತಲುಪಿಸುತ್ತೇನೆ" ಎಂದು ಹೇಳಿದ ಐದು ನಿಮಿಶದಲ್ಲೆ ಮನೆ ಎದುರಿಗೆ ನನ್ನ ಮೊಬೈಲಿನೊಂದಿಗೆ ಹಾಜರ್..!! ನನಗೆ ಹೃದಯ ಬಾಯಿಗೆ ಬಂದು ಹೋದಂತೆ ಆಗಿತ್ತು.. ಹೇಗೆ ಪ್ರತಿಕ್ರಿಯಿಸಬೇಕೊ ತಿಳಿಯಲಿಲ್ಲ.. ಹಾಗೆ ಒಳಗೆ ಬಂದೆ.. ಮೊದಲು ನನ್ನ ಗೆಳತಿಗೆ ಸಂದೇಶ ಕಳಿಸಿದೆ...



ಅಣ್ಣಾ... ನಿಮಗೆ ಎಷ್ಟು ದನ್ಯವಾದ ಹೇಳಿದರೂ ಸಾಲದು... ನಿಮ್ಮ ಉಪಕಾರ ಎಂದಿಗೂ ಮರೆಯುವುದಿಲ್ಲ, ನಿಮಗೆ ಚಿರರುಣಿ... :)


ದೇವರ ಜೊತೆ ಒಂದು ಮುಂಜಾನೆಯ ಚರ್ಚೆ


ದೇವರು: ಹಲೋ ... ನನ್ನ ಪ್ರೀತಿಯ ...... ನೀವು ನನಗೆ ಕರೆ ಮಾಡಿದ್ದರಾ??
ನಾನು:ನಿಮಗೆ ಕರೆನಾ?... ಇಲ್ಲ.. ಯಾರು ನೀವು ?..
ದೇವರು: ಸ್ವರ್ಗದಿಂದ ದೇವರುನಿಮ್ಮ ಪ್ರಾರ್ಥನೆಗಳನ್ನು ಕೇಳಿದೆಹಾಗಾಗಿ ನಿಮ್ಮ ಜೊತೆ ಮಾತಾಡೋಣವೆಂದು ನಾನು ಭಾವಿಸಿದೆ
ನಾನು: ನಾನು ಪ್ರಾರ್ಥನೆ ಮಾಡುತ್ತೇನೆ. ನನಗೆ ಒಳ್ಳೆಯ ಅನುಭವ ಸಿಗುತ್ತದೆ. ಈಗ ವಾಸ್ತವವಾಗಿ ಯಾವುದೋ ಕೆಲಸದಲ್ಲಿ ನಿರತನಾಗಿದ್ದೇನೆ..
ದೇವರು: ನೀವು ಯಾವುದರಲ್ಲಿ ನಿರತರಾಗಿದ್ದೀರಿ ?.... ಎಲ್ಲವೂ ಕಾರ್ಯನಿರತವಾಗಿವೆ .... ಇರುವೆಗಳೂ ಸಹ ತುಂಬಾ ಕಾರ್ಯನಿರತವಾಗಿವೆ ...
ನಾನು: ಗೊತ್ತಿಲ್ಲ ..... ಆದರೆ ನನಗೆ ವಿರಾಮ ಸಿಗುತ್ತಿಲ್ಲ. ಬಿಡುವಿಲದ ಜೀವನವಾಗಿ ಮಾರ್ಪಟ್ಟಿದೆ, ಯವಾಗಲೂ ಕೆಲಸದ ದಟ್ಟಣೆಯೆ.
ದೇವರು: ಹೌದು. ಚಟುವಟಿಕೆ ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ. ಆದರೆ ಉತ್ಪಾದಕತೆ
ಫಲಿತಾಂಶವನ್ನು ನಿಮಗೆ ಕೊಡುತ್ತದೆ. ಚಟುವಟಿಕೆ ಸಮಯ ತೆಗೆದುಕೊಳ್ಳುತ್ತದೆ. ಉತ್ಪಾದಕತೆ ಸಮಯವನ್ನು ಕಡಿಮೆಗೊಳಿಸುತ್ತದೆ.
ನಾನು: ಗೊತ್ತಾಯಿತು. ಆದರೆ ನಾನು ಇನ್ನೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ..
ನೀವು ಇನ್ಸ್ಟಂಟ್ ಮೆಸೇಜಿಂಗ್ ಚಾಟಿನಲ್ಲಿ ನನ್ನನ್ನು Buzz ಮಾಡುತ್ತೀರೆಂದು ನಾನು ನಿರೀಕ್ಷಿಸಿರಲಿಲ್ಲ.
ದೇವರು:ಕೆಲವು ಸ್ಪಷ್ಟತೆ ನೀಡುವ ಮೂಲಕ, ಸಮಯಕ್ಕಾಗಿ ನಿಮ್ಮ ಹೋರಾಟವನ್ನು ಪರಿಹರಿಸಬೇಕೆಂದುಕೊಂಡಿದ್ದೆ
. ಈ ನಿವ್ವಳ ಯುಗದಲ್ಲಿ, ನಾನು ನಿಮಗೆ ಆರಾಮದಾಯಕವಾದ ಮಾಧ್ಯಮದ ಮೂಲಕ ನಿಮ್ಮನ್ನು ತಲುಪಲು ಬಯಸಿದ್ದೆ...
ನಾನು: ಈಗ ಹೇಳಿ, ಏಕೆ ಜೀವನ ಈ ರೀತಿ ಸಂಕೀರ್ಣ ಆಗಿದೆ?
ದೇವರು: ಜೀವನವನ್ನು ವಿಶ್ಲೇಷಿಸುವದನ್ನು ನಿಲ್ಲಿಸಿ ....... ಕೇವಲ ಜೀವಿಸಿ ....ವಿಶ್ಲೇಷಿಸುವುದು ಜೀವನವನ್ನು ಸಂಕೀರ್ಣ ಮಾಡುತ್ತದೆ.
ನಾನು: ಏಕೆ ನಾವು ನಿರಂತರವಾಗಿ ಅಸಂತೋಷದಿಂದ ಇರುತ್ತೇವೆ?
ದೇವರು: ನಿಮ್ಮ ಇವತ್ತು ನೀವು ನಾಳೆಯ ಬಗ್ಗೆ ಯೋಚಿಸಿದ ನಿನ್ನೆ
ನೀವು ವಿಶ್ಲೇಷಿಸುವುದರಿಂದ ನೀವು ಆತಂಕಗೊಳ್ಳುತ್ತೀರಿ.
ಆತಂಕಪಟ್ಟುಕೊಳ್ಳುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ, ಹಾಗಾಗಿ ನೀವು ಸಂತೋಷವಾಗಿರುವುದಿಲ್ಲ..
ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು ಅನುಭವಿಸುವುದಲ್ಲ. ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ
ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
           ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು      ಅನುಭವಿಸುವುದಲ್ಲ.  ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ

ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು ಅನುಭವಿಸುವುದಲ್ಲ. ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ
ನಾನು: ನಿಮ್ಮ ಪ್ರಕಾರ ಈ ಅನುಭವ ಉಪಯುಕ್ತವೆ ?
ದೇವರು: ಹೌದು. ಪ್ರತಿ ವಿಚಾರದಲ್ಲಿ, ಅನುಭವ ಎನ್ನುವುದು ಕಠಿಣ ಶಿಕ್ಷಕನ ಹಾಗೆ. ಮೊದಲು ಪರೀಕ್ಷೆಯನ್ನು ಇಟ್ಟು ನಂತರ ಪಾಠವನ್ನು ಕಲಿಸುತ್ತಾರೆ
ನಾನು: ಆದರೂ, ಏಕೆ ನಾವು ಇಂತಹ ಪರೀಕ್ಷೆಗಳ ಮೂಲಕ ಸಾಗಬೇಕು? ಯಾಕೆ?? ನಾವು
ಸಮಸ್ಯೆಗಳಿಂದ ಮುಕ್ತವಾಗಲು ಏಕೆ ಸಾಧ್ಯವಿಲ್ಲ ?
ದೇವರು: ತೊಂದರೆಗಳು ಪ್ರಯೋಜನಕಾರಿ ಪಾಠಗಳನ್ನು ಕಲಿಸುವ ಉದ್ದೇಶಪೂರ್ವಕ ರೋಡ್^ಬ್ಲೋಕ್..  ಇವು
 ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುತ್ತವೆ.
ಆಂತರಿಕ ಶಕ್ತಿ ವೃದ್ದಿಸುವುದು ನೀವು ಸಮಸ್ಯೆಗಳಿಂದ ಪಾರಾದಾಗಲಲ್ಲಾ ಬದಲಾಗಿ ಹೋರಾಟ ಮತ್ತು ಧಾರಣಶಕ್ತಿ ಬರುತ್ತದೆ
ನಾನು:ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಲವಾರು ಸಮಸ್ಯೆಗಳ ನಡುವೆಯೂ ನಾವು ಎತ್ತ ಸಾಗುತ್ತಿದ್ದೇವೆ ಅಂತ ಗೊತ್ತಿಲ್ಲ
ದೇವರು: ನೀವು ಹೊರಗೆ ನೋಡಿದರೆ ನೀವು ಎತ್ತ ಸಾಗುತ್ತಿದ್ದೀರಿ ಎಂದು ತಿಳಿಯುವುದಿಲ್ಲ. ಒಳಗೆ ನೋಡಿ.ನಿಮ್ಮನ್ನು ನೀವೆ ನೋಡಿಕೊಳ್ಳಿ, ಹೊರಗೆ ನೋಡುತ್ತಿರುವುದು, ನಿಮ್ಮ ಕನಸಿನ ಲೋಕ. ಒಳಗೆ ನೋಡಿ, ನೀವು ಜಾಗೃತಗೊಳ್ಳುತ್ತೀರಿ
ಕಣ್ಣು ದೃಷ್ಟಿ ನೀಡುತ್ತದೆ. ಹೃದಯ ಅಂತರ್ದೃಷ್ಟಿ ನೀಡುತ್ತದೆ
ನಾನು: ಕೆಲವೊಮ್ಮೆ ಸರಿಯಾದ ದಾರಿಯಲ್ಲಿ ಹೋದರೂ ಯಶಸ್ಸು ಬೇಗ ಸಿಗದಿದ್ದಾಗ ನೋವಾಗುತ್ತದೆ. ನಾನು ಏನು ಮಾಡಬೇಕು?
ದೇವರು: ಯಶಸ್ಸು ಎಂದು ಇತರರು ನಿರ್ಧರಿಸುವ ಅಳತೆಯಾಗಿದೆ. ತೃಪ್ತಿಯ ಪ್ರಮಾಣವನ್ನು
 ನಿರ್ಧರಿಸುವವರು ನೀವು.
ಮುಂದಿನ ಸವಾರಿಯ ಬಗ್ಗೆ ತಿಳಿಯುವ ಬದಲು , ಸವಾರಿ ಮಾಡುವ ದಾರಿಯ ಬಗ್ಗೆ ತಿಳಿಯುವುದು ತೃಪ್ತಿದಾಯಕ
ನೀವು ದಿಕ್ಸೂಚಿ ಜೊತೆಗೆ ಕೆಲಸಮಾಡಿ. ಇತರರು ಗಡಿಯಾರದೊಂದಿಗೆ ಕೆಲಸ ಮಾಡಲಿ
ನಾನು: ಕಠಿಣ ಕಾಲದಲ್ಲಿ, ಪ್ರೇರಣೆ ಉಳಿಯಲು ಏನು ಮಾಡಬೇಕು ?
ದೇವರು: ಯಾವಾಗಲೂ ನೀವು ಎಷ್ಟು ದೂರ ಕ್ರಮಿಸಿದ್ದೀರಿ ಎಂದು ನೋಡಿ, ಎಷ್ಟು ದೂರ ಬಾಕಿ ಇದೆ ಎಂದು ಅಲ್ಲ... ಯಾವಾಗಲೂ ನಿಮ್ಮ ಬಳಿ ಏನು ಇದೆಯೊ ಅದರ ಬಗ್ಗೆ ಯೋಚಿಸಿ, ಇಲ್ಲದರ ಬಗ್ಗೆ ಅಲ್ಲ..
ನಾನು: ಕೆಲವೊಮ್ಮೆ ನಾನು ಯಾರು, ನಾನು ಯಾಕೆ ಇಲ್ಲಿ ಇದ್ದೇನೆ ಎಂದು ಕೇಳಿಕೊಳ್ಳುತ್ತೇನೆ. ನಾನು ಉತ್ತರ ಪಡೆಯಲು ಸಾಧ್ಯವಾಗಿಲ್ಲ
ದೇವರು: ನೀವು ಯಾರು ಎಂದು ತಿಳಿಯುವ ಬದಲು, ಆದರೆ ನೀವು ಯಾರಾಗಲು ಬಯಸುತ್ತೀರಿ ಎಂದು  ನಿರ್ಧರಿಸಿ
ಎಂದು. ಇಲ್ಲೆ ಏಕೆ ಇದ್ದೀರಿ ಎಂದು ಉದ್ದೇಶ ತಿಳಿಯುವುದನ್ನು ನಿಲ್ಲಿಸಿ. ಉದ್ದೇಶವನ್ನು ನೀವೆ ರಚಿಸಿ ಮತ್ತು ಅದರಂತೆ ಕಾರ್ಯಪ್ರವೃತ್ತರಾಗಿ. ಜೀವನ
ಆವಿಶ್ಕಾರದ ಪ್ರಕ್ರಿಯೆಅಲ್ಲ  ಆದರೆ ಸೃಷ್ಟಿಮಾಡುವ ಪ್ರಕ್ರಿಯೆ..
ನಾನು:ಜೀವನದಲ್ಲಿ ಅತ್ಯುತ್ತಮ ಗಳಿಕೆ ಪಡೆಯುವುದು ಹೇಗೆ?
ದೇವರು: ವಿಷಾದವಿಲ್ಲದೆ ನಿಮ್ಮ ಭೂತಕಾಲವನ್ನು ಎದುರಿಸಿ, ವಿಶ್ವಾಸದಿಂದ ನಿಮ್ಮ ಪ್ರಸ್ತುತವನ್ನು ನಿರ್ವಹಿಸಿ
 ಭಯ ಇಲ್ಲದೆ ಭವಿಷ್ಯದ ತಯಾರಿನಡೆಸಿ..
ನಾನು: ಒಂದು ಕೊನೆಯ ಪ್ರಶ್ನೆ.. ಕೆಲವೊಮ್ಮೆ ನನ್ನದು ಉತ್ತರವಿಲ್ಲದ ಪ್ರಾರ್ಥನೆ ಅಂತ ಅನಿಸುತ್ತದೆ??
ದೇವರು: ಉತ್ತರ್ವಿಲ್ಲದ ಪ್ರಾರ್ಥನೆಗಳೇ ಇಲ್ಲ. ಕೆಲವೊಮ್ಮೆ ಉತ್ತರ "ಇಲ್ಲ" ಅಂತಿರುತ್ತದೆ
ನಾನು: ಈ ಅದ್ಭುತ ಚರ್ಚೆಗೆ ಧನ್ಯವಾದಗಳು. ಹೊಸವರ್ಷ-೨೦೧೨ ನ್ನು ಹೊಸ ಸ್ಪೂರ್ತಿಯೊಂದಿಗೆ ಆರಂಭಿಸಿದ್ದಕ್ಕೆ ಖುಶಿಯಿದೆ
ದೇವರು: ನಂಬಿಕೆ ಇಟ್ಟುಕೊ ಮತ್ತು ಭಯವನ್ನು ಬಿಡು. ನಿಮ್ಮ ಅನುಮಾನಗಳನ್ನು ನಂಬಬೇಡಿ ಮತ್ತು ನಿಮ್ಮ ನಂಬಿಕೆಗಳನ್ನು ಅನುಮಾನಿಸಿ
                                     ಎಲ್ಲರಿಗೂ ಹೊಸವರ್ಷದ ಹಾರ್ಧಿಕ ಶುಭಾಶಯಗಳು
                                                                            ವಂದನೆಗಳೊಂದಿಗೆ
                                                                                              
                                                                                                        -ಶಿಶಿರ್..










Thursday, 19 January 2012

ತಲೆದಂಡ ಅಗತ್ಯವೇ....!!!


ನನ್ನ ಬರಹ ಪಕ್ವವಾಗಲಿ ಹಾಗು ಅನುಭವ ಸಿಗಲಿ ಎಂಬ ಕಾರಣದಿಂದ ವಿಷಯವನ್ನು ತೆಗೆದುಕೊಂಡೆ, ಸಹಕರಿಸಿ

                       ತಲೆದಂಡ ಅಗತ್ಯವೇ....!!!
                   


 ಹೀನಾಯ ಸೋಲಿನ ಸುಳಿಯಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡಕ್ಕೆ ಮೂವರು ಹಿರಿಯ ಆಟಗಾರರಾದ "ರಾಹುಲ್ ದ್ರಾವಿಡ್ , ಸಚಿನ್ ತೆಂಡುಲ್ಕರ್ , ಕ್ಶ್ಮಣ್ " ಇವರ ನಿವೃತ್ತಿಗೆ ಒತ್ತಾರ್ಯೆ ಕೆಲವರುಆದರೆ ಇದು ಅಗತ್ಯವೇ.. ಅದನ್ನು ತಡೆದುಕೊಳ್ಳುವ ಶಕ್ತಿ ಭಾರತ ತಂಡಕ್ಕೆ ಇದ್ಯಾ ಅಂತ ನೋಡಬೇಕು.ವಿಶ್ವದ ಅತ್ಯಂತ ಬಲಿಷ್ಟ ಬ್ಯಾಟಿಂಗ್ ಪಡೆಗಳಲ್ಲಿ ಒಂದಾಗಿರುವ ಹೊರತಾಗಿಯೂ ಸೋತು ಸುಣ್ಣವಾಗಿರುವ ಭಾರತ ತಂಡ ಇನ್ನು  ಮೊವರು ಇಲ್ಲ ಅಂತಾದರೆ ಅದರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ... ಕ್ವಿಂಟಲಗಟ್ಟಲೆ ಅನುಭವ ಹೊಡಿರುವ ಇವರೇ ವಿದೇಶದ ಅಂಕಣದಲ್ಲಿ ಬೌನ್ಸರ್ಗಳನ್ನುೆದುರಿಸಲು ಪರದಾಡಿದರೆಂದಾಮೇಲೆ ಅನನುಭವಿ ಯುವ ಆಟಗಾರರು ಏನು ತಾನೆ ಮಾಡಿಯಾರು ಎಂಬುದು ಪ್ರಶ್ನೆ.
             
 ಇನ್ನು ಹೇಳಬೇಕೆಂದರೆ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ದ್ರಾವಿಡ್ ಸರಣಿಯುದ್ದಕ್ಕೂ ಉತ್ತಮ ಪದರ್ಶನ ನೀಡಿದ್ದು ಹಾಗು ಲಕ್ಸ್ಮಣ್ ಕೊನೆಯ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನಗಳು ಬಂದಿಲ್ಲಈಗಿನ ಆಸ್ಟೇಲಿಯ ವಿರುದ್ಧದ ಸರಣಿಯಲ್ಲಿ ಸಚಿನ್     ಒಮ್ದೆರಡು ಅರ್ಧಶತಕಗಳಿಸಿದ್ದು ಬಿಟ್ಟರೆ ಬೇರಾರೂ ಅಂತಹ ಪ್ರದರ್ಶನವನ್ನು ನೀಡಿಲ್ಲ.








ಬದಲಿ ವ್ಯವಸ್ಥೆ ಇದ್ಯಾ..!!
                          
              ಆಗಲಿ ಇವರು ನೀವೃತ್ತಿ ತೆಗೆದುಕೊಂಡರು ಅಂತಲೇ ತಿಳಿದುಕೊಳ್ಳೋಣ, ಆದ್ರೆ ಇವರ ಸ್ಥಾನ ತಂಬಲು ಪರ್ಯಾಯ ಆಟಗಾರರು ತಯಾರಾಗಿದ್ದಾರಾ?? ಇವರಷ್ಟೆ 
ಬಲಿಷ್ಟವಾದತಾಂತ್ರಿಕವಾಗಿ ಸದೃಢವಾದ ಆಟಗಾರರು 
 ಈಗ ಎಲ್ಲಿದ್ದಾರೆ?? 
                 

    

       ಸಚಿನ್ ಅವರಂತ ಅಪ್ರತಿಮ ಪ್ರತಿಭೆಗೆ ಬದಲಿ ಆಟಗಾರನನ್ನ ಹುಡುಕುವುದು ದೊಡ್ಡ ವಿಚಾರವೇನಲ್ಲ ಆದರೆ 
      ಅವರ ಸ್ಥಾನಕ್ಕೆ ಅವರಷ್ಟೆ ನ್ಯಾಯ ತುಂಬುವುದು ಕನಸಿನ  ಮಾತು, ಸುಧೀರ್ಘ ೨೩ ವರ್ಷಗಳ ಕಾಲ ಸೇವೆ ನೀಡುವುದು 
       ಮುಂಬರುವ ಆಟಗಾರರಿಗೆ ಅಸಾಧ್ಯ...
            



      
                ಇನ್ನು ಕಲಾತ್ಮಕ ಆಟಗಾರ "ಲಕ್ಷ್ಮಣ್" ಸ್ಥಾನ 
       ತುಂಬುವುದು ಕಷ್ಟವೇ ಸರಿ. ನಾಲ್ಕನೇ ಇನ್ನಿಂಗ್ಸಿನ 
      ವೀರ ಎಂದೇ ಖ್ಯಾತರಾಗಿರುವ ಇವರು ನಾಲ್ಕನೆ ಇನಿಂಗ್ಸಿನಲ್ಲ
      ಅದೆಷ್ಟು ಬಾರಿ ಉತ್ತಮ ಪ್ರದರ್ಶನ ನೀಡಿ ಗೆಲ್ಲಿಸಿಕೊಟ್ಟಿಲ್ಲ ಹೇಳಿ
      ಅದೆಷ್ಟು ಪಂದ್ಯಗಳನ್ನು ಡ್ರಾ  ಮಾಡಿಸಿ ಭಾರತದ 
ಮಾನ ಉಳಿಸಿಲ್ಲ ಹೇಳಿ





ಇನ್ನೊಂದು  'ಗೋಡೆ' ಕಟ್ಟುವುದು ಅಸಾಧ್ಯದ ಮಾತು
                 
                ಭಾರತದ ಗೋಡೆ ಎಂದು ಖ್ಯಾತಿ ಹೊಂದಿರುವ ರಾಹುಲ್ ದ್ರಾವಿಡ್  ಅವರಿಗೆ ಬದಲಿ ಆಟಗಾರನನ್ನು ಹುಡುಕುವುದು ಕನಸಿನ ಮಾತೇ ಸರಿ
     ಏಕೆಂದರೆ ದ್ರಾವಿಡ್ ಕೇವಲ ಅತ್ಯದ್ಭುತ ಬ್ಯಾಟ್ಸ್ಮನ್ ಅಷ್ಟೇ ಅಲ್ಲ.. ಅನುಭವಿ ಮಾಜಿ ನಾಯಕ,ಗೂಟ ರಕ್ಷಕ, ಅತಿ ಹೆಚ್ಚು ಕ್ಯಾಚ್ ಪಡೆದು ಧಾಖಲೆ ಮಾಡಿರುವ ಒಳ್ಳೆಯ ಸ್ಲಿಪ್ ವಿಭಾಗದ ಕ್ಷೇತ್ರರಕ್ಷಕ.. ಬಹುತೇಕ ಎಲ್ಲ ಕಮಾಂಕದಲ್ಲೂ ಆಡಿದ ಅನುಭವ ಇದೆ ದ್ರಾವಿಡ್ ಅವರಿಗೆ..

ಈಗ ಸ್ವಲ್ಪ ಹಿಂದೆ ಹೋಗೋಣ...

              ೨೦೦೮ರಲ್ಲಿ ಗಂಗೂಲಿ ಅವರನ್ನು ಹೊರದಬ್ಬಿದ ಬಿಸಿಸಿಐ
ಅವರಿಂದ ತೆರವಾದ ಸ್ಥಾನವನ್ನು ತುಂಬಲೂ ಇಂದಿಗೂ ಸಹ
ತಿಣುಕಾಡುತ್ತಿದೆ, ಈಗಾಗಲೆ ಐವರು (ಯುವರಾಜ್,ಚೇತೆಶ್ವರ್,
ಕೊಹ್ಲಿ,ದಿನೇಶ್ ಕಾರ್ತಿಕ್,ರೈನಾ) ಆಟಗಾರರು ತಂಡಕ್ಕೆ 
ಬಂದರೂ ಒಬ್ಬರ ಸ್ಥಾನವು ಭದ್ರವಾಗಿಲ್ಲ..

               ಕೇವಲ ಒಂದು ಸ್ಥಾನವನ್ನು ತುಂಬಲು ಸಾಧ್ಯವಾಗದೆ 
ಇದ್ದಾಗ, ಒಮ್ಮಿಂದೊಮ್ಮೆ ಮೂವರು ದಿಗ್ಗಜರ ಸ್ಥಾನವನ್ನು ತುಂಬುವುದು 'ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿದಷ್ಟೆ' ಸತ್ಯಕ್ಕೆ ಹತ್ತಿರ.... :ಪ್
           
                ಹಿರಿಯರ ಕಳಪೆ ಪ್ರದರ್ಶನ ಅಂತ ಏನು ಹೇಳುತ್ತಿದ್ದಾರೋ.. ಇದೇ ಅಂತಿಮವಲ್ಲ... ಎಲ್ಲರಿಗೂ ಕೆಟ್ಟ ಕಾಲ ಬಂದೇ ಬರುತ್ತದೆ ಹಾಗೆಯೆ ಒಳ್ಳೆಯ ಕಾಲವು ಬರುತ್ತದೆ. ಇವರಿಗೆ ಇನ್ನು ಕೆಲವು ವರ್ಷಗಳ ಕಾಲ ಆಡುವ ಶಕ್ತಿಯಿದೆ ಆಡಲಿ ಬಿಡಿ

                ಅಲ್ಲಿಯ ತನಕ ಯುವ ಆಟಗಾರರನು ತಯಾರು ಮಾಡಬೇಕು, ಪ್ರಥಮ ದರ್ಜೆ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವ , ಹೆಚ್ಚಿಗೆ ಸಮಯ ಅಂಕಣದಲ್ಲಿ ನಿಲ್ಲುವ, ಕಲೆಯಲ್ಲಿ ಪಕ್ವವಾಗಿರುವ , ತಾಂತ್ರಿಕವಾಗಿ ಸಧೃಢವಾಗಿರುವ  - ಆಟಗಾರರನ್ನು ಹುಡುಕಿಟ್ಟುಕೊಳ್ಳಬೇಕು

               ನಂತರ ಹಂತಂತವಾಗಿ ಒಬ್ಬೊಬ್ಬರನ್ನಾಗಿ ತಂಡದಲ್ಲಿ ಬದಲಾವಣೆ ಮಾಡುತ್ತ ಹೊಸ ತಂಡವನ್ನು ಕಟ್ಟಬೇಕು. ಆಗ ಯಶಸ್ಸು ದೊರಕುತ್ತದೆ. ಅದು ಬಿಟ್ಟು ಆಯ್ಕೆ ಸಂಧರ್ಬದಲ್ಲಿ ರಾಜಕೀಯ ಮಾಡುತ್ತಾ, ಕ್ವೋಟಾ ಆಧಾರದ ಮೇಲೆ ಅವಕಾಶ ನೀಡುತ್ತಾ ಹೋದರೆ ಕೇವಲ ಬಿಸಿಸಿಐ ಉದ್ಧಾರ ಆಗುತ್ತದೆಯೆ ಹೊರತು ಭಾರತ ಕ್ರಿಕೆಟ್ ಅಲ್ಲ..!
                                                      
                                                                      -ಶಿಶಿರ್..