View My Stats

Monday 16 January 2012

ಆ ಐದು ಪದಗಳು

ಇದು ಶ್ಯಾಮಸುಂದರ ಹೆಗಡೆಯವರ ಸಂಗ್ರಹ..ನನ್ನ ಕನ್ನಡಾನುವಾದ.... ಅವರಿಗೆ ಇಲ್ಲಿ ಪ್ರಕಟಿಸುವ ಬಗ್ಗೆ ಮಾಹಿತಿ ಇದೆ...


ದಂಪತಿಗಳಿಗೆ ಹುಡುಗ ಮದುವೆಯಾದ ಹನ್ನೊಂದು ವರ್ಷಗಳ ನಂತರ ಜನಿಸಿದ್ದ. ಅವರು ಪರಸ್ಪರ ಅತ್ಯಂತ ಪ್ರೀತಿಸುವ ದಂಪತಿಗಳಾಗಿದ್ದರು ಮತ್ತು ಹುಡುಗ ರತ್ನದಂತೆ ಇದ್ದ. ಹುಡುಗನಿಗೆ ಎರಡು ವರ್ಷವಾದಾಗ, ಒಂದು ಬೆಳಿಗ್ಗೆ ಪತಿ ಒಂದು ಔಷಧ ಬಾಟಲಿ ತೆರೆದಿರುವುದನ್ನು ಕಂಡನು.ಅವನಿಗ ಕಚೇರಿಗೆ ತಡವಾಗಿತ್ತು.ಹಾಗಾಗಿ ಅವನು ಬಾಟಲ್ ಮುಚ್ಚಳ ಹಾಕಿ ಅದನ್ನು ಬೀರುವಿನಲ್ಲಿ ಇರಿಸಿಕೊಳ್ಳಲು ತನ್ನ ಪತ್ನಿಗೆ ಹೇಳಿದ. ಆದರೆ  ಪಾಕಶಾಲೆಯಲ್ಲಿ ಮುಳುಗಿಹೋಗಿದ್ದ ಅವನ ಪತ್ನಿ ಸಂಪೂರ್ಣವಾಗಿ ಮರೆತೇಬಿಟ್ಟಳು. ಹುಡುಗನಿಗೆ ಬಾಟಲಿ ಕಂಡಿತು ಮತ್ತು ತಮಾಷೆಯಾಗಿ ಅದರ ಬಳಿ ಹೋಗೆ ಅದನ್ನಿ ಕೈಗೆತ್ತಿಕೊಂಡನು
ಬಾಟಲಿಯಲ್ಲಿನ ದ್ರವದ ಬಣ್ಣದಿಂದ ಆಕರ್ಷಿತನಾದ ಹುಡುಗ ಎಲ್ಲಾ ದ್ರವವನ್ನು ಸೇವಿಸಿದ. ವಯಸ್ಕರಿಗೆ ಮೀಸಲಾದ ಒಂದು ಸಣ್ಣ ಪ್ರಮಾಣದ ವಿಷಪೂರಿತ ಔಷಧಿ ಅದಾಗಿತ್ತು. ಯಾವಾಗ ಮಗು ಅದನ್ನು ಸೇವಿಸಿತೊ, ಅದು ಕುಸಿದು ಬಿತ್ತು..ತಾಯಿ ಅವಸರದಲ್ಲಿ ಆಸ್ಪತ್ರೆಗೆ ಮಗನೊದಿಗೆ ದೌಡಾಯಿಸಿದಳಾದರೂ ಮಗುವಿನ ಪ್ರಾಣ ಹೋಗಿತ್ತು..  ತಾಯಿ ದಿಗ್ಭ್ರಂತಳಾಗಿದ್ದಳು. ಆಕೆ ತನ್ನ ಪತಿಗೆ ಹೇಗೆ ಮುಖ ತೋರಿಸಬೇಕೆಂದು ತಿಳಿಯದೆ ಭಯಪಡುತ್ತಿರುತ್ತಾಳೆ.  ಸುದ್ದಿ ತಿಳೀದು ತಲ್ಲಣಗೊಂಡು ಆಸ್ಪತ್ರೆಗೆ ಬಂದ ತಂದೆ ಸತ್ತ ಮಗು ಕಂಡು, ಅವನ ಪತ್ನಿ ನೋಡಿದ ಮತ್ತು ಕೇವಲ ಐದು ಪದಗಳನ್ನು ಉಚ್ಚರಿಸಿದ.

ಪತಿ ಕೇವಲ "ಪ್ರಿಯೆ, ನಾನು ನಿನ್ನ ಜೊತೆ ಇದ್ದೇನೆ" ಎಂದು

ತಂದೆಯ ಈ ಅನಿರೀಕ್ಷಿತ ಪ್ರತಿಕ್ರಿಯೆ ಪೂರ್ವಭಾವಿಯಾದ ನಡವಳಿಕೆ. ಮಗು ಸತ್ತುಹೋಗಿದೆ. ಅದನ್ನು ಜೀವನದಲ್ಲಿ ಮರಳಿ ತರಲು ಎಂದಿಗೂ ಸಾಧ್ಯವಿಲ್ಲ. ತಾಯಿಯ ಮೇಲೆ ಆರೋಪಹೊರಿಸುವುದರಲ್ಲಿ ಯಾವುದೆ ಅರ್ಥವಿಲ್ಲ. ಸ್ವತಃ ಪತಿಯೆ ಬಾಟಲಿಯನ್ನು ದೂರ ಇಡಲು ಸಮಯ ತೆಗೆದುಕೊಂಡಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ.. ಯಾರನ್ನೂ ಆರೋಪಿಸಬಾರದು. ಅವಳೂ ಸಹ ಅವಳ ಒಬ್ಬಳೇ ಮಗನನ್ನು ಕಳೆದುಕೊಂಡಳು. ಅವಳಿಗೆ, ಆ ಕ್ಷಣದಲ್ಲಿ ಅಗತ್ಯವಿದ್ದುದ್ದು ಏನೆಂದರೆ ಸಮಾಧಾನ ಹಾಗೂ ಪತಿಯಿಂದ ಅನುಕಂಪ. ಅವನು ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದನು.

ಎಲ್ಲರೂ ಇದೇ ದೃಷ್ಟಿಕೋನದಿಂದ ಜೀವನವನ್ನು ನೋಡಲು ತಿಳಿದರೆ, ಜಗತ್ತಿನಲ್ಲಿ ಹೆಚ್ಚು ಸಮಸ್ಯೆಗಳು ಇಲ್ಲದಂತೆ ಮಾಡಬಹುದು. "A journey of a thousand miles
begins with a single step". . ನಮ್ಮ ಅಸೂಯೆ, ಸ್ವಾರ್ಥ ಮತ್ತು ಆತಂಕಗಳನ್ನು ದೂರಮಾಡಬೇಕು. ಆಗ ನಮಗೆ ವಸ್ತು-ಸ್ಥಿತಿ ನಾವು ತಿಳದಷ್ಟು ಕಠಿಣವಾಗಿಲ್ಲ ಎಂದು ತಿಳಿಯುತ್ತದೆ

ಒಂದು ಸಂಬಂಧ ಆಗಿರಲಿ,ಕೆಲಸ ಅಥವಾ ನಾವು ತಿಳಿದಿರುವ ಜನರು.. ನಾವು ಕೆಲವೊಮ್ಮೆ "ಯಾರು ಜವಾಬ್ದಾರಿ" ಅಥವಾ ಯಾರನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬಹುದು ಅಂತ ಯೋಚಿಸುವುದರಲ್ಲಿಯೇ ಸಮಯ ವ್ಯರ್ಥ ಮಾಡುತ್ತೇವೆ..

ಈ ರೀತಿಯಲ್ಲಿ ಜೀವನದ ಸವಿಯನ್ನು ಕಳೆದುಕೊಳ್ಳುತ್ತೇವೆ....

No comments:

Post a Comment