ಭಾರತದ ಹೆಮ್ಮೆಯ ಪುತ್ರ , ಕರ್ನಾಟಕದ ಕುವರ (ಹುಟ್ಟಿದ್ದು ಬೇರೆಡೆಯಾದರು, ತನ್ನ ಪ್ರತಿಭೆಯನ್ನು ಧಾರೆ ಎರೆದಿದ್ದು ಕರ್ನಾಟಕದಲ್ಲೆ ಅಲ್ಲವೆ) , ಸವ್ಯಸಾಚಿ , ಜೆಂಟಲ್-ಮ್ಯಾನ್ ಎಂದೇ ಕರೆಸಿಕೊಳ್ಳುವ ಇವರು, ಕ್ರೀಡಾಂಗಣದ ಒಳಗೂ-ಹೊರಗೂ ತಮ್ಮ ಗೌರವವನ್ನು ಎಂದೂ ಕೆಡಿಸಿಕೊಂಡಿಲ್ಲ.. ಅವರೇ ರಾಹುಲ್ ದ್ರವಿಡ್...
ಇಂದು ಅವರ ಹುಟ್ಟುಹಬ್ಬ...
ಜನ್ಮದಿನದ ಹಾರ್ಧಿಕ ಶುಭಾಶಯಗಳು ರಾಹುಲ್....
ಡಿಯರ್ ರಾಹುಲ್....
ಆಡು ಮುಟ್ಟದ ಸೊಪಿಲ್ಲ
ನೀ ನೀಡದ ಸೇವೆಯಿಲ್ಲ... (ಭಾರತ ತಂಡಕ್ಕೆ)
ಆದರೂ ನಿನ್ನ ಪ್ರತಿಭೆ
ಜನಕ್ಕೆ ಅರ್ಥವಾಗಿಲ್ಲವಲ್ಲ...
ಕೆಲವರಿಗೆ ನಿನ್ನನ್ನು
ತೆಗಳುವುದನ್ನು
ಬಿಟ್ಟರೆ ಬೇರೆ ಕೆಲಸವಿಲ್ಲ..
ಆದರೆ ಇವುಗಳಿಗೆ ಕಿವಿಕೊಡದೆ
ನಿನ್ನ ಸಾಧನೆ ಮುಂದುವರಿಸಿದ್ದಿಯ..
ಇದುವೆ ಅಲ್ಲವೆ
ನಮಗೆಲ್ಲರಿಗೂ ಹೆಮ್ಮೆಯ ವಿಷಯ...
ನೀನು ಆಗಿದ್ದೀಯ ಹಲವರಿಗೆ ಸ್ಪೂರ್ತಿ
ನಿನ್ನ ಸಾಮರ್ಥ್ಯವನ್ನು
ಧಾರೆ ಎರೆದಿದ್ದೀಯ ಪೂರ್ತಿ..
ಹೊರಹೊಮ್ಮಲಿ ಸಾಧನೆ ಮತ್ತಷ್ಟು..
ಭಾರತ ತಂಡಕ್ಕೆ ಸಿಗಲಿ
ನಿನ್ನ ಸೇವೆ ಇನ್ನಷ್ಟು..
-ನಿನ್ನ ಅಭಿಮಾನಿ... :)
No comments:
Post a Comment