ನನ್ನ ಬರಹ ಪಕ್ವವಾಗಲಿ ಹಾಗು
ಅನುಭವ ಸಿಗಲಿ ಎಂಬ
ಕಾರಣದಿಂದ ಈ ವಿಷಯವನ್ನು ತೆಗೆದುಕೊಂಡೆ, ಸಹಕರಿಸಿ
ತಲೆದಂಡ ಅಗತ್ಯವೇ....!!!
ಹೀನಾಯ ಸೋಲಿನ ಸುಳಿಯಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡಕ್ಕೆ ಮೂವರು ಹಿರಿಯ ಆಟಗಾರರಾದ "ರಾಹುಲ್ ದ್ರಾವಿಡ್ , ಸಚಿನ್ ತೆಂಡುಲ್ಕರ್ , ಲಕ್ಶ್ಮಣ್ " ಇವರ ನಿವೃತ್ತಿಗೆ ಒತ್ತಾರ್ಯೆ ಕೆಲವರು. ಆದರೆ ಇದು ಅಗತ್ಯವೇ.. ಅದನ್ನು ತಡೆದುಕೊಳ್ಳುವ ಶಕ್ತಿ ಭಾರತ ತಂಡಕ್ಕೆ ಇದ್ಯಾ ಅಂತ ನೋಡಬೇಕು.ವಿಶ್ವದ ಅತ್ಯಂತ ಬಲಿಷ್ಟ ಬ್ಯಾಟಿಂಗ್ ಪಡೆಗಳಲ್ಲಿ ಒಂದಾಗಿರುವ ಹೊರತಾಗಿಯೂ ಸೋತು ಸುಣ್ಣವಾಗಿರುವ ಭಾರತ ತಂಡ ಇನ್ನು ಈ ಮೊವರು ಇಲ್ಲ ಅಂತಾದರೆ ಅದರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ... ಕ್ವಿಂಟಲಗಟ್ಟಲೆ ಅನುಭವ ಹೊಡಿರುವ ಇವರೇ ವಿದೇಶದ ಅಂಕಣದಲ್ಲಿ ಬೌನ್ಸರ್ಗಳನ್ನುೆದುರಿಸಲು ಪರದಾಡಿದರೆಂದಾಮೇಲೆ ಅನನುಭವಿ ಯುವ ಆಟಗಾರರು ಏನು ತಾನೆ ಮಾಡಿಯಾರು ಎಂಬುದು ಪ್ರಶ್ನೆ.
ಇನ್ನು ಹೇಳಬೇಕೆಂದರೆ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ದ್ರಾವಿಡ್ ಸರಣಿಯುದ್ದಕ್ಕೂ ಉತ್ತಮ ಪದರ್ಶನ ನೀಡಿದ್ದು ಹಾಗು ಲಕ್ಸ್ಮಣ್ ಕೊನೆಯ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನಗಳು ಬಂದಿಲ್ಲ. ಈಗಿನ ಆಸ್ಟೇಲಿಯ ವಿರುದ್ಧದ ಸರಣಿಯಲ್ಲಿ ಸಚಿನ್ ಒಮ್ದೆರಡು ಅರ್ಧಶತಕಗಳಿಸಿದ್ದು ಬಿಟ್ಟರೆ ಬೇರಾರೂ ಅಂತಹ ಪ್ರದರ್ಶನವನ್ನು ನೀಡಿಲ್ಲ.
ಬದಲಿ ವ್ಯವಸ್ಥೆ ಇದ್ಯಾ..!!
ಆಗಲಿ ಇವರು ನೀವೃತ್ತಿ ತೆಗೆದುಕೊಂಡರು ಅಂತಲೇ ತಿಳಿದುಕೊಳ್ಳೋಣ, ಆದ್ರೆ ಇವರ ಸ್ಥಾನ ತಂಬಲು ಪರ್ಯಾಯ ಆಟಗಾರರು ತಯಾರಾಗಿದ್ದಾರಾ?? ಇವರಷ್ಟೆ
ಬಲಿಷ್ಟವಾದ , ತಾಂತ್ರಿಕವಾಗಿ ಸದೃಢವಾದ ಆಟಗಾರರು
ಈಗ ಎಲ್ಲಿದ್ದಾರೆ??
ಬಲಿಷ್ಟವಾದ , ತಾಂತ್ರಿಕವಾಗಿ ಸದೃಢವಾದ ಆಟಗಾರರು
ಈಗ ಎಲ್ಲಿದ್ದಾರೆ??
ಸಚಿನ್ ಅವರಂತ ಅಪ್ರತಿಮ ಪ್ರತಿಭೆಗೆ ಬದಲಿ ಆಟಗಾರನನ್ನ ಹುಡುಕುವುದು ದೊಡ್ಡ ವಿಚಾರವೇನಲ್ಲ ಆದರೆ
ಅವರ ಸ್ಥಾನಕ್ಕೆ ಅವರಷ್ಟೆ ನ್ಯಾಯ ತುಂಬುವುದು ಕನಸಿನ ಮಾತು, ಸುಧೀರ್ಘ ೨೩ ವರ್ಷಗಳ ಕಾಲ ಸೇವೆ ನೀಡುವುದು
ಮುಂಬರುವ ಆಟಗಾರರಿಗೆ ಅಸಾಧ್ಯ...
ಇನ್ನು ಕಲಾತ್ಮಕ ಆಟಗಾರ "ಲಕ್ಷ್ಮಣ್" ಸ್ಥಾನ
ತುಂಬುವುದು ಕಷ್ಟವೇ ಸರಿ. ನಾಲ್ಕನೇ ಇನ್ನಿಂಗ್ಸಿನ
ವೀರ ಎಂದೇ ಖ್ಯಾತರಾಗಿರುವ ಇವರು ನಾಲ್ಕನೆ ಇನಿಂಗ್ಸಿನಲ್ಲ
ಅದೆಷ್ಟು ಬಾರಿ ಉತ್ತಮ ಪ್ರದರ್ಶನ ನೀಡಿ ಗೆಲ್ಲಿಸಿಕೊಟ್ಟಿಲ್ಲ ಹೇಳಿ,
ಅದೆಷ್ಟು ಪಂದ್ಯಗಳನ್ನು ಡ್ರಾ ಮಾಡಿಸಿ ಭಾರತದ
ಮಾನ ಉಳಿಸಿಲ್ಲ ಹೇಳಿ
ಅದೆಷ್ಟು ಬಾರಿ ಉತ್ತಮ ಪ್ರದರ್ಶನ ನೀಡಿ ಗೆಲ್ಲಿಸಿಕೊಟ್ಟಿಲ್ಲ ಹೇಳಿ,
ಅದೆಷ್ಟು ಪಂದ್ಯಗಳನ್ನು ಡ್ರಾ ಮಾಡಿಸಿ ಭಾರತದ
ಮಾನ ಉಳಿಸಿಲ್ಲ ಹೇಳಿ
ಇನ್ನೊಂದು 'ಗೋಡೆ' ಕಟ್ಟುವುದು ಅಸಾಧ್ಯದ ಮಾತು
ಏಕೆಂದರೆ ದ್ರಾವಿಡ್ ಕೇವಲ ಅತ್ಯದ್ಭುತ ಬ್ಯಾಟ್ಸ್ಮನ್ ಅಷ್ಟೇ ಅಲ್ಲ.. ಅನುಭವಿ ಮಾಜಿ ನಾಯಕ,ಗೂಟ ರಕ್ಷಕ, ಅತಿ ಹೆಚ್ಚು ಕ್ಯಾಚ್ ಪಡೆದು ಧಾಖಲೆ ಮಾಡಿರುವ ಒಳ್ಳೆಯ ಸ್ಲಿಪ್ ವಿಭಾಗದ ಕ್ಷೇತ್ರರಕ್ಷಕ.. ಬಹುತೇಕ ಎಲ್ಲ ಕಮಾಂಕದಲ್ಲೂ ಆಡಿದ ಅನುಭವ ಇದೆ ದ್ರಾವಿಡ್ ಅವರಿಗೆ..
ಈಗ ಸ್ವಲ್ಪ ಹಿಂದೆ ಹೋಗೋಣ...
ಅವರಿಂದ ತೆರವಾದ ಸ್ಥಾನವನ್ನು ತುಂಬಲೂ ಇಂದಿಗೂ ಸಹ
ತಿಣುಕಾಡುತ್ತಿದೆ, ಈಗಾಗಲೆ ಐವರು (ಯುವರಾಜ್,ಚೇತೆಶ್ವರ್,
ಕೊಹ್ಲಿ,ದಿನೇಶ್ ಕಾರ್ತಿಕ್,ರೈನಾ) ಆಟಗಾರರು ತಂಡಕ್ಕೆ
ಬಂದರೂ ಒಬ್ಬರ ಸ್ಥಾನವು ಭದ್ರವಾಗಿಲ್ಲ..
ಕೊಹ್ಲಿ,ದಿನೇಶ್ ಕಾರ್ತಿಕ್,ರೈನಾ) ಆಟಗಾರರು ತಂಡಕ್ಕೆ
ಬಂದರೂ ಒಬ್ಬರ ಸ್ಥಾನವು ಭದ್ರವಾಗಿಲ್ಲ..
ಕೇವಲ ಒಂದು ಸ್ಥಾನವನ್ನು ತುಂಬಲು ಸಾಧ್ಯವಾಗದೆ
ಇದ್ದಾಗ, ಒಮ್ಮಿಂದೊಮ್ಮೆ ಮೂವರು ದಿಗ್ಗಜರ ಸ್ಥಾನವನ್ನು ತುಂಬುವುದು 'ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿದಷ್ಟೆ' ಸತ್ಯಕ್ಕೆ ಹತ್ತಿರ.... :ಪ್
ಇದ್ದಾಗ, ಒಮ್ಮಿಂದೊಮ್ಮೆ ಮೂವರು ದಿಗ್ಗಜರ ಸ್ಥಾನವನ್ನು ತುಂಬುವುದು 'ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿದಷ್ಟೆ' ಸತ್ಯಕ್ಕೆ ಹತ್ತಿರ.... :ಪ್
ಹಿರಿಯರ ಕಳಪೆ ಪ್ರದರ್ಶನ ಅಂತ ಏನು ಹೇಳುತ್ತಿದ್ದಾರೋ.. ಇದೇ ಅಂತಿಮವಲ್ಲ... ಎಲ್ಲರಿಗೂ ಕೆಟ್ಟ ಕಾಲ ಬಂದೇ ಬರುತ್ತದೆ ಹಾಗೆಯೆ ಒಳ್ಳೆಯ ಕಾಲವು ಬರುತ್ತದೆ. ಇವರಿಗೆ ಇನ್ನು ಕೆಲವು ವರ್ಷಗಳ ಕಾಲ ಆಡುವ ಶಕ್ತಿಯಿದೆ ಆಡಲಿ ಬಿಡಿ
ಅಲ್ಲಿಯ ತನಕ ಯುವ ಆಟಗಾರರನು ತಯಾರು ಮಾಡಬೇಕು, ಪ್ರಥಮ ದರ್ಜೆ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವ , ಹೆಚ್ಚಿಗೆ ಸಮಯ ಅಂಕಣದಲ್ಲಿ ನಿಲ್ಲುವ, ಕಲೆಯಲ್ಲಿ ಪಕ್ವವಾಗಿರುವ , ತಾಂತ್ರಿಕವಾಗಿ ಸಧೃಢವಾಗಿರುವ ೪-೫ ಆಟಗಾರರನ್ನು ಹುಡುಕಿಟ್ಟುಕೊಳ್ಳಬೇಕು
ನಂತರ ಹಂತಂತವಾಗಿ ಒಬ್ಬೊಬ್ಬರನ್ನಾಗಿ ತಂಡದಲ್ಲಿ ಬದಲಾವಣೆ ಮಾಡುತ್ತ ಹೊಸ ತಂಡವನ್ನು ಕಟ್ಟಬೇಕು. ಆಗ ಯಶಸ್ಸು ದೊರಕುತ್ತದೆ. ಅದು ಬಿಟ್ಟು ಆಯ್ಕೆ ಸಂಧರ್ಬದಲ್ಲಿ ರಾಜಕೀಯ ಮಾಡುತ್ತಾ, ಕ್ವೋಟಾ ಆಧಾರದ ಮೇಲೆ ಅವಕಾಶ ನೀಡುತ್ತಾ ಹೋದರೆ ಕೇವಲ ಬಿಸಿಸಿಐ ಉದ್ಧಾರ ಆಗುತ್ತದೆಯೆ ಹೊರತು ಭಾರತ ಕ್ರಿಕೆಟ್ ಅಲ್ಲ..!
-ಶಿಶಿರ್..
-ಶಿಶಿರ್..
No comments:
Post a Comment