ಆಟೊ ಚಾಲಕರ ಬಗ್ಗೆ ಹೀಗೆಳೆಯುವವರೆ ಜಾಸ್ತಿ. ಸುಲಿಗೆ ಮಾಡುತ್ತಾರೆ,ಒರಟಾಗಿ ನಡೆದುಕೊಳ್ಳುತ್ತಾರೆ, ಹಾಗೆ ಹೀಗೆ ಎಂದು... ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಇದನ್ನು ಸುಳ್ಳು ಎಂದು ಸಾರಿ ಸಾರಿ ಹೇಳುತ್ತಿವೆ.. ಬೆಂಗಳೂರಿನಲ್ಲಿ ಆಟೊ ಚಾಲಕನೊಬ್ಬ ಐದು ಲಕ್ಷ ರೂಪಾಯಿಗಳನ್ನು ಹಿಂದಿರುಗುಸುದ್ದನ್ನು ಕೇಳಿ ಮನತುಂಬಿ ಬಂತು.. ಅದೂ ನಗದು ಹಣವನ್ನು... ಹ್ಯಾಟ್ಸ್ ಆಫ್ಹ್...
ಈಗ ನನ್ನ ವಿಷಯಕ್ಕೆ ಬರೋಣ.. ನನಗೆ ಜೀವಕ್ಕಿಂತಲೂ ಹೆಚ್ಚಾಗಿದ್ದ ಮೊಬೈಲ್ ಫೋನನ್ನು ಆಟೊದಲ್ಲಿ ಕಳೆದುಕೊಂಡು ಮರುಕ್ಷಣದಲ್ಲೆ ಅದು ಸಿಕ್ಕಿತು... ಒಂದುಸಲ ಜೀವ ಹೋಗಿ ಬಂದಂತಾಯಿತು..
ಗೆಳತಿಯ ಗಿಫ್ಟ್..
ಈ ಮೊಬೈಲ್ ದುಡ್ಡಿನ ಲೆಕ್ಕಾಚಾರದಲ್ಲಿ ಅಂತಹ ತುಟ್ಟಿಯದೇನಲ್ಲ. ಎರಡು ಸಾವಿರದ ಒಳಗಿನದೇ.. ಆದರೆ ನನಗೆ ಇದು ಹೃದಯಕ್ಕೆ ಬಹಳ ಹತ್ತಿರವಾದದ್ದು.. ಕಾರಣ..??
ನನ್ನ ಜೀವದ ಗೆಳತಿಯ ಬಗ್ಗೆ ಈ ಹಿಂದೆ ಹೇಳಿದ್ದೆ, ನೆನಪಿರಬಹುದು... ಹಂ... ಅವಳೆ ಈ ಮೊಬೈಲನ್ನು ನನ್ನ ಜನ್ಮದಿನದಂದು ಕೊಡುಗೆಯಾಗಿ ನೀಡಿದ್ದಳು... ಹಾಗಾಗಿ ಇದು ನನಗೆ ಜೀವನದಲ್ಲಿ ಇದುವರೆಗಿನ ಅತ್ಯಮೂಲ್ಯ ವಸ್ತು..
ಇವತ್ತು (೨೦ / ೧ / ೨೦೧೨) ರಾತ್ರಿ ೮:೩೦ರ ಸುಮಾರಿಗೆ ನಾನು ತಂದೆಯೊಂದಿಗೆ, ನನ್ನ ಅತ್ತೆಯನ್ನು ಪಿಕ್ ಮಾಡಲು ಬಸ್ ಸ್ಟ್ಯಾಂಡಿನ ಕಡೆ ಹೋಗಿದ್ದೆ... ವಾಪಸ್ ಬರುವಾಗ ಆಟೊದಲ್ಲಿ ಹೊರಟ್ವಿ. ದಾರಿಮಧ್ಯದಲ್ಲಿ ನನ್ನ ಮೊಬೈಲ್ ಫ್ಹೋನು ಆಟೊದಲ್ಲೆ ಎಲ್ಲೋ ಬಿದ್ದು ಹೋಗಿದೆ, ನನಗೆ ಗೊತ್ತಗಲಿಲ್ಲ..ಆಮೇಲೆ ಮನೆಗೆ ಬಂದ ನಂತರ ನನ್ನ ಪ್ಯಾಂಟಿನ ಕಿಸೆಯನ್ನು ತಡಕಾಡಿದರೂ ನನ್ನ ಮೊಬೈಲ್ ಸಿಗಲಿಲ್ಲ..ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು.. ಏನು ಮಾಡಬೇಕೊ ತಿಳಿಯಲಿಲ್ಲ.. ನನ್ನ ದುರದೃಷ್ಟಕ್ಕೆ ಆ ಮೊಬೈಲ್ 'ಮನಮೋಹನ್ ಸಿಂಗ್' ಮೋಡ್ ಅಲ್ಲಿ ಇತ್ತು.. ಕೇವಲ ಲೈಟ್ ಬರುತಿತ್ತು ಅಷ್ಟೆ..ಕಂಪನ ಕೂಡ ಆಗುತ್ತಿರಲಿಲ್ಲ..
ಪ್ರಯತ್ನ ಮಾಡಲೇಬೇಕು ಅಂತ ಮತ್ತೆ ತಿರುಗಿ ಬಸ್ ಸ್ಟ್ಯಾಂಡ್ ಕಡೆ ಹೊರಟೆ ಆ ಆಟೊವನ್ನು ಹುಡುಕಲು.. ನಾನು ನನ್ನ ಇನ್ನೊಂದು ಮೊಬೈಲಿನಿಂದ ಈ ಮೊಬೈಲಿಗೆ ನಿರಂತರವಾಗಿ ಕರೆ ಮಾಡುತ್ತಿದ್ದೆ, ಆದರೆ ಅದು ಪ್ರಯೋಜನ ಇಲ್ಲ ಅಂತ ಅನ್ನಿಸತೊಡಗಿತು..
ಅದೇ ಸಮಯದಲ್ಲಿ ನನ್ನ ಅಮ್ಮನ ಮೊಬೈಲಿಗೆ ಒಂದು ಅಜ್ನಾತ ಕರೆ ಬಂತು. ಆ ಕಡೆಯಿಂದ ಮಾತನಾಡಿದ ಆ ಪುಣ್ಯಾತ್ಮ ಕೇಳಿದ.. "ನಿಮ್ಮ ಮಗ ಮೊಬೈಲ್ ಕಳೆದುಕೊಂಡಿದ್ದಾನೆಯೆ??" ಅಂತ ಕೇಳಿದ.. ಅದನ್ನು ಕೇಳುತ್ತಿದ್ದಂತೆಯೆ ನಾನು ದಡಬಡಸಿ ಅಮ್ಮನ ಫೋನ್ ತೆಗೆದುಕೊಂಡು ಮಾತಾಡಿದೆ, ಆಗ ಅವನು ಹೇಳಿದ್ದೇನು ಗೊತ್ತೆ..?? "ಸರ್ ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಗುವುದಿಲ್ಲವೆ??, ಅದನ್ನು ನಿಮ್ಮ ಮನೆಗೆ ತಲುಪಿಸುತ್ತೇನೆ" ಎಂದು ಹೇಳಿದ ಐದು ನಿಮಿಶದಲ್ಲೆ ಮನೆ ಎದುರಿಗೆ ನನ್ನ ಮೊಬೈಲಿನೊಂದಿಗೆ ಹಾಜರ್..!! ನನಗೆ ಹೃದಯ ಬಾಯಿಗೆ ಬಂದು ಹೋದಂತೆ ಆಗಿತ್ತು.. ಹೇಗೆ ಪ್ರತಿಕ್ರಿಯಿಸಬೇಕೊ ತಿಳಿಯಲಿಲ್ಲ.. ಹಾಗೆ ಒಳಗೆ ಬಂದೆ.. ಮೊದಲು ನನ್ನ ಗೆಳತಿಗೆ ಸಂದೇಶ ಕಳಿಸಿದೆ...
ಅಣ್ಣಾ... ನಿಮಗೆ ಎಷ್ಟು ದನ್ಯವಾದ ಹೇಳಿದರೂ ಸಾಲದು... ನಿಮ್ಮ ಉಪಕಾರ ಎಂದಿಗೂ ಮರೆಯುವುದಿಲ್ಲ, ನಿಮಗೆ ಚಿರರುಣಿ... :)
ಸುಂದರವಾಗಿದೆ...
ReplyDelete"ಮನಮೋಹನ್ ಸಿಂಗ್ ಮೋಡ್" ಅದ್ಭುತವಾಗಿದೆ..
:) ದನ್ಯವಾದಗಳು.. ಖರೆ ಅವರೆ....
ReplyDelete