View My Stats

Tuesday 10 January 2012

ಜೀವದ ಗೆಳತಿ.. ಯಶಸ್ಸಿನ ಒಡತಿ...



ನನಗೆ ಇಂದು ಬರೆಯುವ ಪರೀಕ್ಷೆಗಳು ಮುಗಿಯುವುದಕ್ಕೂ.,ಈ ಘಟನೆ ನಡೆಯುವುದಕ್ಕೂ., ನನಗೆ ಈ ವಿಚಾರ ತಲೆಗೆ ಹೊಳಿಯುವುದಕ್ಕೂ ಸರಿಯಾಯಿತು..

ನನ್ನ ಗೆಳತಿ ಬಗ್ಗೆ ಒಂದೆರಡು ಮಾತು..

ಹೆಸರು : ಚಿನ್ನಿ
ನನಗೆ ನಿಜವಾಗಲು ಹೆಮ್ಮೆ ಇದೆ ನಾನು ಅಂತಹ ಹುಡುಗಿಯ ಸ್ನೇಹಿತ ಅಂತ ಹೇಳಿಕೊಳ್ಳುವುದಕ್ಕೆ...
ನಮ್ಮ ಸ್ನೇಹದ ಆರಂಭವೇ ಒಂತರಾ ಮಜಾ..
ಅಂದು ಮೊದಲನೆ ದಿನ.. ಅವಳ ಕೈ-ಬರಹವನ್ನು ನೋಡಿ.. ಇದು ಯಾರ ಕೈ-ಬರಹವಪ್ಪ ಇಷ್ಟು ಸುಂದರವಾಗಿದೆ ಅಂತ ಹುಡುಕಿದೆ.. ಆಗ ಇವಳು ನನ್ನ ಕಣ್ಣಿಗೆ ಬಿದ್ದಳು.. ಹಾಗೆ ಶುರುವಾದ ನಮ್ಮ ಸ್ನೇಹ ಇಂದು ಅದೆಷ್ಟೊ ಏಳು-ಬೀಳುಗಳನ್ನು ಕಂಡು ಈಗ ಸುಭದ್ರವಾಗಿದೆ.. ನಾವು ಅದೆಷ್ಟು ಬಾರಿ ಸ್ನೇಹವನ್ನು ಮುರಿಯುವ ಮಾತಾಡಿದ್ದೇವೊ ದೇವರಿಗೆ ಗೊತ್ತು.. ಆದರೆ ನಮಗಿಬ್ಬರಿಗು ಗೊತ್ತಿತ್ತು ನಾವಿಬ್ಬರು ಎಷ್ಟು ಅವಲಂಬಿತರಾಗಿದ್ದೇವೆ ಅಂತ.. ಅದಕ್ಕೆ ಸ್ವಲ್ಪ ಹೊತ್ತಿನಲ್ಲೆ ಮತ್ತೆ ಮೊದಲಿನಂತೆ ಅತ್ಯುತ್ತಮ ಸ್ನೇಹಿತರಾಗಿ ಬಿಡುತ್ತಿದ್ದೆವು...

ಕೆಲವೊಮ್ಮೆ ನನಗೆ ಅನಿಸುತ್ತದೆ ನಾನು ಇಷ್ಟೊಂದು ಒಳ್ಳೆಯ ಸ್ನೇಹಕ್ಕೆ ಅರ್ಹನಾ ಅಂತ??

ನಮ್ಮ ಈವರೆಗಿನ ಪಯಣದ ಒಂದು ಕಪ್ಪುಚುಕ್ಕೆಯಂದರೆ ಬಹಳ ಹಿಂದೆ ನಾನು ಅವಳ ಬಗ್ಗೆ ಅನುಮಾನ ಪಟ್ಟಿದ್ದೆ.. ಅನುಮಾನ ಅಂದರೆ ಕೆಟ್ಟ ರೀತಿಯಲ್ಲಿ ಅಲ್ಲ.. ಬದಲಾಗಿ ಅವಳು ನನಗೆ ತೋರುತ್ತಿದ್ದ love n affection ಬಗ್ಗೆ.. ಇದು ಅವಳಿಗೆ ಗೊತ್ತಿದೆಯೊ ಇಲ್ಲ್ವೊ ನಾ ಕಾಣೆ..ಆದ್ರೆ ಬಹುಬೇಗ ನನ್ನ ಅನುಮಾನ ದೂರವಾಯಿತು, ನನಗೆ ಈಗಲೂ ನಾಚಿಕೆಯಾಗುತ್ತದೆ ಅದನ್ನು ನೆನಸಿಕೊಂಡರೆ ಎಂತ ಮೂರ್ಖ್ಹತನದ ಕೆಲಸ ಮಾಡಿಬಿಟ್ನಲ್ಲಪ್ಪ ಅಂತ...

ನಮ್ಮ ಸ್ನೇಹ ಎಷ್ಟು ಗಾಡವಾಗಿತ್ತೆಂದರೆ.. ನಾನು ಮಾಡಿದ ಸಣ್ಣ ಸಣ್ಣ ಕೆಲಸಗಳು/ಆಡುವ ಮಾತುಗಳು ಅವಳ ಮೇಲೆ ತುಂಬಾ ಪ್ರಭಾವ ಬೀರುತ್ತಿತ್ತು.. ಮತ್ತೊಂದು ವಿಷಯ ಅಂದ್ರೆ ನಮ್ಮ ನಡುವೆ ಯಾವುದೆ ರೀತಿಯ ಮುಚ್ಚುಮರೆಗಳಿರಲಿಲ್ಲ, ಬಹುಷಹ ಇದೆ ನಮ್ಮ ಗಟ್ಟಿ ಸ್ನೇಹಕ್ಕೆ ಕಾರಣವಿರಬಹುದು...


ಇಲ್ಲಿಗೆ ಬರುವ ಮೊದಲು ನನಗೂ ಸ್ನೇಹಿತರಿದ್ದರು ಇಲ್ಲ ಅಂತಲ್ಲ.. ಆದರೆ ಇವಳಂತ ಸ್ನೇಹಿತ/ತೆಯನ್ನು ನೋಡಿರಲಿಲ್ಲ.. ನಮ್ಮ ನಡುವೆ ಎಷ್ಟೊ ಭಿನ್ನಾಭಿಪ್ರಾಯಗಳು ಬಂದಿದ್ದವು, ಸುತ್ತಮುತ್ತಲಿನವರು ಬಾಯಿಗೆ ಬಂದಹಾಗೆ ಮಾತಾಡಿದರು.. ಆದರೆ ಇದ್ಯಾವುದು ನಮ್ಮ ಸ್ನೇಹಕ್ಕೆ ಅಡ್ಡಿ ಬರಲಿಲ್ಲ...

ಆದರೆ ಇತ್ತೀಚೆಗೆ ಕೆಲ'ವೊಬ್ಬರ' ಕೆಟ್ಟ ಕಣ್ಣು ಬಿತ್ತೋ ಏನೊ ಗೊತ್ತಿಲ್ಲ.. ನಮ್ಮ ಗೆಳೆತನ ಸ್ವಲ್ಪ ದಿನಗಳ ಕಾಲ ದುಃಸ್ಥಿತಿಯನ್ನು ಅನುಭವಿಸಬೇಕಾಯಿತು.. ಅದರಲ್ಲೂ ನಾನೆ ಸ್ವಲ್ಪ ಅಸಂಬದ್ದವಾಗೆ ನಡೆದುಕೊಂಡೆ.. ಆಗಲು ಅವಳು ಸಹಿಸಿಕೊಂಡಳು.. ಇಷ್ಟರ ಮೇಲೆ ನಮ್ಮ ಸ್ನೇಹ ಇನ್ನು ಗಾಡವಾಗಿದೆ..

ಇನ್ನೊಂದು ಮುಖ್ಯವಾದ ವಿಷಯ ಅಂದರೆ.. ಮೊದಲನೆಯ ಸೆಮಿಸ್ಟರಿನಿಂದಲೂ ಪರೀಕ್ಷೆ ಹತ್ತಿರ ಬಂದಾಗ ನಾವಿಬ್ಬರು ಒಟ್ಟಿಗೆ ಓದಿಕೊಳ್ಳುತ್ತಿದ್ದೆವು..ಒಟ್ಟಿಗೆ ಅಂದರೆ ಅಕ್ಕ-ಪಕ್ಕ ಕುಳಿತು ಅಲ್ಲಾ.. ಅವಳ ಮನೆಯಲ್ಲಿ ಅವಳು, ನನ್ನ ಮನೆಯಲ್ಲಿ ನಾನು.. ಆದರೆ ಮೊಬೈಲ್ ನಮ್ಮ ಬಳಿ ಇರುತ್ತಿತ್ತಲ್ಲಾ.. ಅದರಿಂದಲೆ ಹೇಳುವುದು-ಕೇಳುವುದು ಎಲ್ಲವು... ಆ ಸಮಯದಲ್ಲಿ ಬೆಳಿಗೆ ಒಬ್ಬರ್ನ್ನೊಬ್ಬರು ಎಬ್ಬಿಸುವ ಜವಾಬ್ದಾರಿ ನಮ್ಮದೆ ಆಗಿತ್ತು

ಈಗ ಇವತ್ತು ಆದ ಘಟನೆ...
ನಿನ್ನೆ ರಾತ್ರಿ ಓದು ಮುಗಿಸಿ 'ಶುಭ ರಾತ್ರಿ' ಹೇಳುವ ಸಂಧರ್ಬದಲ್ಲಿ ಮಾತಾಡಿಕೊಂಡೆವು "ನಾಳೆ ಬೆಳಿಗ್ಗೆ ೫ ಕ್ಕೆ ಎದ್ದರಾಯಿತು ಅಂತ... ಅಂತೆಯೆ ನಾನು ೪;೪೫ ಕ್ಕೆ ಅಲರಾಮ್ ಕೂಡಾ ಇಟ್ಟೆ..

ಆದರೆ ನನಗೆ ಎಚ್ಚರವಾಗಲೇ ಇಲ್ಲೆ.. ಅವಳು ಎದ್ದಿದ್ದು ೬ ಕ್ಕೆ ಬಿಡಿ ಅದು ಬೇರೆ ಮಾತು.. ಅವಳಿಗೆ ನಿದ್ದೆ ಅಂದರ ಪ್ರಾಣ.. ನನಗೆ ಅಲಾರಮ್  ಹೊಡೆದುಕೊಂದಡಿದ್ದು ಕೇಳಲೇ ಇಲ್ಲಾ... ೬;೫೭ ಕ್ಕೆ ಒಂದು ಕರೆ ಬಂತು ನನ್ನ ಮೊಬೈಲಿಗೆ... ಯಾರದ್ದು ಅಂತ ನೋಡಿದರೆ ಇವಳದ್ದೆ.. ಅಂತೂ ಇಂತೂ ಎದ್ದು ಫ್ರೆಷ್ ಆಗಿ ಅವಳಿಗೆ ಮೆಸೆಜ್ ಮಾಡೋಣವೆಂದು ಮೊಬೈಲ್ ತೆಗೆದುಕೊಂಡೆ.. ನನಗೆ ಆಶ್ಛರ್ಯ , ಶಾಕ್ ಎರಡೂ ಆಯಿತು.. ಬರೊಬರಿ ೪೮ ಮಿಸ್ ಕಾಲುಗಳು ಇದ್ದವು..

ಯಾರದಪ್ಪ ಈ ಪರಿ ಮಿಸ್ಸ್ ಕರೆಗಳು ಅಂತ ನೋಡಿದೆ,, ಇನ್ನು ಆಶ್ಚರ್ಯ.. ಅದು ಈ ಹುಡಗಿಯದೆ.. ೬ ಘಂಟೆಯಿಂದ ೬:೫೭ ರ ತನಕ ಕುಳಿತು ಒಂದಕ್ಷರವನ್ನೂ ಓದದೆ ನನ್ನನ್ನು ಎಬ್ಬಿಸಲು ಪ್ರಯತ್ನ ಮಾಡಿದ್ದಾಳೆ...!!! ನನಗೆ ಹೇಗೆ ಪ್ರತಿಕ್ರಿಯಿಸಬೇಕು ಅಂತ ತಿಳಿಯಲಿಲ್ಲ..


ಎಲ್ಲರಿಗೂ ಎಲ್ಲಿರುತ್ತೆ ಇಷ್ಟೊಂದು ತಾಳ್ಮೆ?? ನನಗೂ ಇದೆ ಸಂಧರ್ಬ ಬಂದಾಗ ಹೆಚ್ಚೆಂದರೆ ೧೫-೨೦ಮ ಬಾರಿ ಪ್ರಯ್ತ್ನಿಸುತ್ತಿದ್ದೆ ಆಮೇಲೆ ಕೋಪವೆ ಬರುತ್ತಿತ್ತು.. ಆದರೆ ಇವಳು ನಾನು ಏಳುವ ವರೇಗು ಬಿಡಲಿಲ್ಲ.... ಇದಲ್ಲ್ವಾ ಸ್ನೇಹ ಅಂದ್ರೆ... :) :) :)


ಜೀವದ ಗೆಳತಿ ಚಿನ್ನಿ.. ತುಂಬಾ ದನ್ಯವಾದಗಳು...


(ಸ್ನೇಹಿತರೆ ಈ ಘಟನೆ ನಿಮಗೆಲ್ಲ ಸಾಧಾರಣ ಅಂತ ಅನಿಸಿರಬಹುದು.. ಆದರೆ ನನಗಂತೂ ಅಲ್ಲ... ನಾನು ನನ್ನ ಗೆಳತಿಗೆ ದನ್ಯವಾದಗಳನು ಹೇಳಲು ಅವಕಾಶಕ್ಕಾಗೆ ಕಾಯುತ್ತಿದ್ದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡೆ))

10 comments:

  1. very nice..........

    ReplyDelete
  2. ಸೊಗಸಾಗಿ ಬರೆದಿದ್ದೀರಿ. ಅಭಿನಂದನೆಗಳು.

    ReplyDelete
  3. ತಂಬಾ ದನ್ಯವಾದಾಳು ಸರ್.. ನಿಮ್ಮ ಪ್ರೋತ್ಸಾಹ ಎಂದೂ ಹೀಗೆ ಇರಲಿ @rajendra sir

    ReplyDelete
  4. ಇದು ಸಾದಾರಣವಾದ ಘಟನೆಯಲ್ಲ ಮಿತ್ರ.ಮನ ಮುಟ್ಟುವ ಬರಹ.
    ಇದಕ್ಕೇ ಸ್ನೇಹ ಅಂತ ಹೇಳೋದು ಆಲ್ವಾ??
    ನಿಮ್ಮ ಸ್ನೇಹ ಸದಾ ಹೀಗೆ ಇರಲಿ ಅನ್ನೋದು ನನ್ನ ಆಶಯ.

    ಸ್ನೇಹ ಅನ್ನೋದು ಪವಿತ್ರವಾದ ಬಂಧನವೇ..
    ಆದರೆ ಅದು ನೋಡುವವರ ಕಣ್ಣಿಗೆ ಯಾವಾಗಲೂ ವಿಚಿತ್ರವಾಗಿಯೇ ಕಾಣುತ್ತೆ.

    ReplyDelete
  5. ದನ್ಯವಾದಗಳು ಸರ್.. ನಿಮ್ಮ ಮಾತುಗಳು ನನ್ನ ಆತ್ಮ್ವಿಶ್ವಾಸವನ್ನು ಇಮ್ಮಡಿಗೊಳಿಸಿದೆ @khare sir

    ReplyDelete
  6. ಸುಂದರ ಆಪ್ತ ಬರಹ..ಅಭಿನಂದನೆಗಳು.

    ReplyDelete
  7. ಥ್ಯಾಂಕ್ಯು ಸರ್.. ದನ್ಯವಾದಗಳು @venkata sir

    ReplyDelete
  8. ತುಂಬಾ ಸುಂದರವಾಗಿದೆ ಶಿಶಿರ್.. ಆತ್ಮೀಯ ಸ್ನೇಹದ ಸುಂದರವಾದ ಪುಟಗಳನ್ನು ಕಣ್ಣ ಮುಂದೆ ತೆರೆದಿಟ್ಟಂತೆನಿಸಿತು.. ನಿಮ್ಮ ಸ್ನೇಹವನ್ನು ನೋಡಿ ನನ್ನ ಮನಸ್ಸು ತುಂಬಿ ಬಂತು.. ನನ್ನ ಗೆಳತಿ ಅಮ್ಮುನನ್ನು ನೆನಪಿಸಿದಿರಿ, ಗೆಳತಿಯೆಂದರೆ ಗೆಳತಿಯೆ ಆ ಗೆಳೆತನಕ್ಕೆ ಬೇರೆ ಯಾವುದೇ ಬಂಧನದ ಹಂಗಿಲ್ಲ..:) ಆದರೆ ಒಂದು ಮಾತು ಆ ಸ್ನೇಹ ಗೆಳೆತನವಲ್ಲದೆ ಅದಕ್ಕೂ ಮಿಗಿಲಾದುದ್ದಾ ಎಂದು ಒಮ್ಮೆ ಖಾತ್ರಿಪಡಿಸಿಕೊಳ್ಳಿ ಏಕೆಂದರೆ ಜೀವದ ಗೆಳತಿಯನ್ನು ಜೀವನಕ್ಕೂ ಗೆಳತಿಯಾಗಿ ಉಳಿಸಿಕೊಳ್ಳುವ ಪುಣ್ಯ ಕೆಲವರಿಗೆ ಇರುತ್ತದೆ..

    ReplyDelete
  9. @dewdrop

    ಹೌದು ಸರ್.. ಆದರೆ. ನಮ್ಮದು ಸ್ನೇಹದ ಉತ್ತುಂಗವೇ ಹೊರತು ಅದರೆ ಮೇಲೆ ಒಂದಿಂಚೂ ಹೋಗಿಲ್ಲ... ಇನ್ನು ಹೇಳಬೇಕೆಂದರೆ ಅವಳಿಗೆ ಒಬ್ಬ ಪ್ರಿಯತಮನೂ ಇದ್ದಾನೆ.. ನಮ್ಮ ಸ್ನೇಹಕ್ಕೆ ಈ ವಿಷಯ ಅಡ್ಡ ಬರಲಿಲ್ಲ

    ReplyDelete